ಬಾಲಿ(ಇಂಡೋನೇಷಿಯಾ):ಭಾರತದ ಟಾಪ್ ಶಟ್ಲರ್ಗಳಾದ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಬಿಡಬ್ಲೂಎಫ್ ವಿಶ್ವ ಟೂರ್ ಫೈನಲ್ಸ್ನ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ.
2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಪಿವಿ ಸಿಂಧು ಎ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ಲಿನ್ ಕ್ರಿಸ್ಟೋಫರ್ಸೆನ್ ವಿರುದ್ಧ 21-14, 21-16ರ ಅಂತರದಿಂದ ಸುಲಭ ಗೆಲುವು ಸಾಧಿಸಿದರು. ಬಿ ಗುಂಪಿನ ಪುರುಷರ ವಿಭಾಗದಲ್ಲಿ ಮಾಜಿ ನಂಬರ್ 1 ಶಟ್ಲರ್ ಕಿಡಂಬಿ ಶ್ರೀಕಾಂತ್ ಫ್ರಾನ್ಸ್ನ ಟೋಮಾ ಜೂನಿಯರ್ ಪೊಪೊವ್ ವಿರುದ್ಧ ನಡೆದ 42 ನಿಮಿಷಗಳ ಪಂದ್ಯದಲ್ಲಿ 21-14, 21-16ರಲ್ಲಿ ಗೆಲುವು ಸಾಧಿಸಿದರು.
ಹಾಲಿ ವಿಶ್ವ ಚಾಂಪಿಯನ್ ಸಿಂಧು 2018ರಲ್ಲಿ ಟೂರ್ ಫೈನಲ್ಸ್ ಗೆದ್ದಿದ್ದರು. ಈ ಪ್ರಶಸ್ತಿಯನ್ನು ಗೆದ್ದಿರುವ ಏಕೈಕ ಭಾರತೀಯಳಾಗಿರುವ ಅವರು ಮುಂದಿನ ಸುತ್ತಿನಲ್ಲಿ ಜರ್ಮನಿಯ ಇವೋನ್ ಲೀ ವಿರುದ್ಧ ಸೆಣಸಾಡಲಿದ್ದಾರೆ.