ಕರ್ನಾಟಕ

karnataka

ETV Bharat / sitara

ಕಾಲೇಜು ದಿನಗಳಲ್ಲಿ ನಿಧಿ ಅಜ್ಜಿ ಮನೆಗೆ ಪಟಾಕಿ ಹಚ್ಚಿ ಭಯ ಹುಟ್ಟಿಸಿದ ಆ ನಟ ಯಾರು ಗೊತ್ತಾ...? - Big boss 8 contestants

ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದ ವೇಳೆ ಯಶ್ ತಮ್ಮ ಸ್ನೇಹಿತರೊಂದಿಗೆ ಸೇರಿ ನಿಧಿ ಅಜ್ಜಿ ಮನೆಯೊಳಗೆ ಸರ ಪಟಾಕಿ ಹಚ್ಚಿ ಎಸೆದಿದ್ದರಂತೆ. ಈ ವಿಚಾರವನ್ನು ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಲ್ಲಿ ತಮ್ಮ ಸಹಸ್ಪರ್ಧಿಗಳೊಂದಿಗೆ ಹೇಳಿಕೊಂಡಿದ್ದಾರೆ.

Nidhi subbaiah
ನಿಧಿ ಸುಬ್ಬಯ್ಯ

By

Published : Mar 3, 2021, 9:04 AM IST

ಬಿಗ್​​ಬಾಸ್ ಸೀಸನ್ 8 ಆರಂಭವಾಗಿದ್ದು ದೊಡ್ಮನೆಯಲ್ಲಿ ಸ್ಪರ್ಧಿಗಳು 2 ದಿನಗಳನ್ನು ಕಳೆದಿದ್ದಾರೆ. ಈ ಸಮಯದಲ್ಲಿ ಸ್ಪರ್ಧಿಗಳು ತಮ್ಮ ಹಿನ್ನೆಲೆ, ಮಧುರ ನೆನಪುಗಳು, ಬೇಸರದ ಸಂಗತಿ ಎಲ್ಲವನ್ನೂ ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಟಿ ನಿಧಿ ಸುಬ್ಬಯ್ಯ ಕೂಡಾ ಕಾಲೇಜು ದಿನಗಳಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡು ಸಹಸ್ಪರ್ಧಿಗಳೊಂದಿಗೆ ಆ ವಿಚಾರ ಹಂಚಿಕೊಂಡಿದ್ದಾರೆ.

(ಫೋಟೋ, ವಿಡಿಯೋ ಕೃಪೆ: ಕಲರ್ಸ್ ಕನ್ನಡ)

ಅದು ನಿಧಿ ಸುಬ್ಬಯ್ಯ ಮೈಸೂರಿನಲ್ಲಿ ಕಾಲೇಜು ಓದುತ್ತಿದ್ದ ದಿನಗಳು. ನಿಧಿ ತಮ್ಮ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದಂತೆ. ರೋಸ್​ ಡೇಯಂದು ಅವರಿಗೆ 50-60 ರೋಸ್​ಗಳು ಬರುತ್ತಿದ್ದವಂತೆ. ಆದರೆ ಒಂದು ರೋಸ್​ ಡೇಯಂದು ಕೆಲವರು ನಿಧಿಗೆ ಕಿರುಕುಳ ಕೊಡುವ ಉದ್ದೇಶದಿಂದ 8 ಹುಡುಗರು 4 ಬೈಕ್​​​ಗಳಲ್ಲಿ ಬಂದು ನಿಧಿ ಮಲಗುವ ಕೋಣೆ ಎಂದು ತಪ್ಪು ತಿಳಿದು ಅವರ ಅಜ್ಜಿ ಮಲಗುವ ಕೋಣೆಗೆ ಸರ ಪಟಾಕಿಯನ್ನು ಹಚ್ಚಿ ಎಸೆದಿದ್ದರಂತೆ. ಆ ಸಮಯದಲ್ಲಿ ಎಲ್ಲರಿಗೂ ಗಾಬರಿ ಆಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗದೆ ಕರ್ಟನ್ ಮಾತ್ರ ಸುಟ್ಟುಹೋಗಿದೆ. ಆದರೆ ಆ ಪಟಾಕಿ ಎಸೆದಿದ್ದು ಮಾತ್ರ ಯಾರು ಎಂದು ಬಹಳ ದಿನಗಳವರೆಗೆ ಯಾರು ಎಂದು ನಿಧಿ ಹಾಗೂ ಮನೆಯವರಿಗೆ ತಿಳಿದಿರಲಿಲ್ಲ.

ಇದನ್ನೂ ಓದಿ:'ಧಮಾಕಾ' ಚಿತ್ರದಲ್ಲಿನ ತಮ್ಮ ಪಾತ್ರದ ಪರಿಚಯ ಮಾಡಿಸಿದ ಕಾರ್ತಿಕ್ ಆರ್ಯನ್

ಓದು ಮುಗಿದ ಮೇಲೆ ನಾನು ನಟನೆಗೆ ಬಂದೆ. ಒಂದು ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ನನ್ನ ಬಳಿ ಬಂದ ನಟರೊಬ್ಬರು ಒಂದು ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನ ಬಳಿ ಕ್ಷಮೆ ಕೇಳಬೇಕು ಎಂದರು. ನಾನು ಅಚ್ಚರಿಗೊಂಡೆ, ಏಕೆ ಕ್ಷಮೆ ಎಂದು ಕೇಳಿದೆ. ಕಾಲೇಜು ದಿನಗಳಲ್ಲಿ ನಿಮ್ಮ ಅಜ್ಜಿ ಮನೆಗೆ ಪಟಾಕಿ ಹಚ್ಚಿದ್ದು ನಾವೇ ಎಂದರು. ಆ ವಿಚಾರ ಕೇಳಿ ನನಗೆ ಆಶ್ಚರ್ಯವಾಯ್ತು. ಈಗ ಅವರು ದೊಡ್ಡ ಆ್ಯಕ್ಟರ್, ಯಾರಿರಬಹುದು ಎಂದು ಗೆಸ್ ಮಾಡಿ ಅಂದರು ನಿಧಿ. ಯಾರು ಅದು ಎಂದು ಎಲ್ಲರೂ ಕುತೂಹಲದಿಂದ ನಿಧಿ ಅವರನ್ನು ನೋಡುತ್ತಿದ್ದಾಗ ನಿಧಿ, ಧೀರ ಧೀರ ಸುಲ್ತಾನ.... ಎಂದು ಹಾಡಿದರು. ಆಗಲೇ ಅದು ಯಶ್ ಎಂದು ಎಲ್ಲರಿಗೂ ತಿಳಿದದ್ದು. ಯಶ್ ಕೂಡಾ ಮೈಸೂರಿನವರೇ ಎಂದು ನಿಧಿ ಹೇಳಿದರು. ಕಾಲೇಜು ದಿನಗಳಲ್ಲಿ ಯಶ್ ಹೀಗೆಲ್ಲಾ ಮಾಡಿದ್ರಾ ಎಂದು ಕೇಳಿ ಸ್ಪರ್ಧಿಗಳಿಗೂ ಆಶ್ಚರ್ಯವಾಗಿದೆ. ಅದನ್ನು ನೋಡಿದ ವೀಕ್ಷಕರಿಗೆ ಕೂಡಾ ಇದೇ ಅನುಭವ ಆಗಿದೆ.

ABOUT THE AUTHOR

...view details