'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಕಿರುತೆರೆ ಪ್ರಿಯರ ಮನಗೆದ್ದಿದ್ದ ಶೈನ್ ಶೆಟ್ಟಿ ಬಿಗ್ಬಾಸ್ಗೆ ಹೋದ ನಂತರ ತಮ್ಮ ಮಾತು, ನಡವಳಿಕೆ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಜನರ ಪ್ರೀತಿಯಿಂದ ಬಿಗ್‍ಬಾಸ್ ಸೀಸನ್ 7 ವಿನ್ನರ್ ಕೂಡಾ ಆಗಿ ಜಯಗಳಿಸಿದ್ದರು.
ಶೈನ್ ಶೆಟ್ಟಿ ಮನೆಗೆ ಬಂತು ಹೊಸ ಕಾರು...ಈ ಗಿಫ್ಟ್ ನೀಡಿದ್ದು ಯಾರು ಗೊತ್ತಾ..? - Lakshmi Baramma fame Shine shetty
ಬಿಗ್‍ಬಾಸ್ ಸೀಸನ್ 7 ರಲ್ಲಿ ಜಯಗಳಿಸಿದ ಶೈನ್ ಶೆಟ್ಟಿ ಅವರಿಗೆ ಟಾಟಾ ಮೋಟಾರ್ಸ್ ಹೊಸ ಮಾದರಿಯ ಕಾರನ್ನು ಗಿಫ್ಟ್ ನೀಡಿದೆ. ಕಾರು ಪಡೆದ ಶೈನ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳ ಜೊತೆ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ನಲ್ಲಿ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಅವರಿಗೆ ಬಿಗ್‍ಬಾಸ್ ಕಾರ್ಯಕ್ರಮದ ಪ್ರಾಯೋಜಕತ್ವ ಪಡೆದುಕೊಂಡಿದ್ದ ಟಾಟಾ ಮೋಟಾರ್ಸ್ ಕಂಪನಿ ಕಾರನ್ನು ಗಿಫ್ಟ್ ನೀಡಲಿದ್ದೇವೆ ಎಂದು ಘೋಷಿಸಿತ್ತು. ಬಹಳ ದಿನಗಳ ನಂತರ ಟಾಟಾ ಮೋಟಾರ್ಸ್ ಮಾತಿನಂತೆ ನಡೆದಿದ್ದು ಶೈನ್ ಶೆಟ್ಟಿ ಅವರಿಗೆ ಕಾರನ್ನು ನೀಡಿದೆ. ಹೊಸ ಮಾದರಿಯ ಕಾರನ್ನು ನೀಡುವ ಸಲುವಾಗಿ ಟಾಟಾ ಮೋಟಾರ್ಸ್ ಇಷ್ಟು ದಿನ ತಡ ಮಾಡಿತಂತೆ. ಟಾಟಾ ಮೋಟಾರ್ಸ್ ಇದೀಗ ಉನ್ನತ ಮಟ್ಟದ ಟಾಟಾ ಆಲ್ಟ್ರೋಜ್ ಹೊಸ ಮಾದರಿಯ ಕಾರನ್ನು ಶೈನ್ ಶೆಟ್ಟಿಯವರಿಗೆ ನೀಡಿದೆ.
ಈ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ, ''ನಿಮ್ಮೆಲ್ಲರ ಆಶೀರ್ವಾದದಿಂದ ಟಾಟಾ ಆಲ್ಟ್ರೋಜ್ ಬಿಗ್‍ಬಾಸ್ ಸೀಸನ್-7 ಕಾರು ನನಗೆ ದೊರೆತಿದೆ. ಈ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ. ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟಾರ್ಸ್ ಹಾಗೂ ಕಾರು ಗಿಫ್ಟ್ ನೀಡಿದ ಟಾಟಾ ಮೋಟಾರ್ಸ್ ಅವರಿಗೂ ಧನ್ಯವಾದ''ಎಂದು ಶೈನ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ.