ಜೀ ಕನ್ನಡ ವಾಹಿನಿಯಲ್ಲಿ ನವೀನ್ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಮುಕ್ತಾಯಗೊಂಡಿದೆ. ಲಾಕ್ಡೌನ್ನಿಂದಾಗಿ ಈಗಾಗಲೇ ಹತ್ತಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರ ನಿಲ್ಲಿಸಿದ್ದು, ಆ ಸಾಲಿಗೆ ನೂತನವಾಗಿ ರಾಧಾ ಕಲ್ಯಾಣ ಧಾರಾವಾಹಿ ಸೇರಿಕೊಂಡಿದೆ.
ರಾಧಾಳಿಗೆ ಕಲ್ಯಾಣವಾಗದೆ ಮುಗಿದ ಧಾರಾವಾಹಿ... ಕೃಷ್ಣ-ರಾಧಾಳ ತುಂಟಾಟ ನೋಡಲು ಇನ್ನಾಗಲ್ಲ! - ರಾಧಾ ಕಲ್ಯಾಣ ಧಾರಾವಾಹಿ ಮುಕ್ತಾಯ
ನವೀನ್ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಮುಕ್ತಾಯ. ಲಾಕ್ಡೌನ್ನಿಂದಾಗಿ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳ ಪಟ್ಟಿಗೆ ನೂತನವಾಗಿ ರಾಧಾ ಕಲ್ಯಾಣ ಧಾರಾವಾಹಿ ಸೇರಿಕೊಂಡಿದೆ.
ಐದು ವರ್ಷಗಳ ಹಿಂದೆ ಆಶು ಬೆದ್ರ ನಿರ್ದೇಶನದಲ್ಲಿ ರಾಧಾ ಕಲ್ಯಾಣ ಎಂಬ ಹೆಸರಿನಲ್ಲಿ ಧಾರಾವಾಹಿ ಪ್ರಸಾರವಾಗಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದೇ ಹೆಸರಿನಿಂದ ಕಳೆದ ಜುಲೈನಲ್ಲಿ ಧಾರಾವಾಹಿ ಪ್ರಸಾರ ಆರಂಭಿಸಿತ್ತು. ಸದಾ ಕಾಲ ಮೋಜು, ಮಸ್ತಿ ಎಂದೇ ಸಮಯ ಕಳೆಯುತ್ತಿದ್ದ ನಾಯಕ ಕೃಷ್ಣ ಯಾವಾಗ ನೋಡಿದರೂ ಪಾರ್ಟಿ ಮಾಡುತ್ತಾ ದಿನ ಕಳೆಯುತ್ತಿದ್ದ ಶ್ರೀಮಂತ ಮನೆಯ ಹುಡುಗ. ಆದರೆ ನಾಯಕಿ ರಾಧಾ ಜವಾಬ್ದಾರಿಯುತ ಹುಡುಗಿ. ಸದಾ ಕಾಲ ರಾಮನನ್ನೇ ಪೂಜಿಸುವ ಆಕೆ ರಾಮನಂತಹ ಗಂಡನೇ ಸಿಗಲಿ ಎಂದು ಬಯಸುತ್ತಿರುತ್ತಾಳೆ. ರಾಮನಂತಹ ಗಂಡ ಬೇಕು ಎಂದು ಬಯಸಿದವಳಿಗೆ ಸಿಕ್ಕಿದ್ದು ಕೃಷ್ಣನಂತಹ ಗಂಡ ಆಲಿಯಾಸ್ ನಾಯಕ ಕೃಷ್ಣ. ತಾನು ಮದುವೆಯಾಗುವ ಹುಡುಗ ತನ್ನೊಬ್ಬಳನ್ನೇ ಇಷ್ಟಪಡಬೇಕು, ಪ್ರೀತಿಸಬೇಕು ಎಂದು ಕನಸು ಕಂಡಿದ್ದ ರಾಧಾ ಅನಿವಾರ್ಯವಾಗಿ ಕೃಷ್ಣನ ಮಡದಿಯಾಗುತ್ತಾಳೆ. ಇತ್ತ ರಾಧಾಳನ್ನು ಕಂಡರೆ ಆಗದ ಕೃಷ್ಣ ನಂತರ ಅವಳನ್ನು ಪ್ರೀತಿಸಲಾರಂಭಿಸಿತ್ತಾನೆ. ರಾಧಾ ಅವನ ಪ್ರೀತಿಯನ್ನು ಒಪ್ಪುತ್ತಾಳಾ, ತನ್ನ ಮಡದಿಗಾಗಿ ಕೃಷ್ಣ ರಾಮನಾಗಿ ಬದಲಾಗುತ್ತಾನಾ ಎಂಬ ಕಥಾ ಹಂದರವುಳ್ಳ ರಾಧಾ ಕಲ್ಯಾಣ ಧಾರಾವಾಹಿ ಇದೀಗ ಕೊನೆಗೊಳ್ಳುತ್ತಿದೆ.
ವಿಷ್ಣು ದಶಾವತಾರ ಎಂಬ ಪೌರಾಣಿಕ ಧಾರಾವಾಹಿಯಲ್ಲಿ ವಿಷ್ಣುವಾಗಿ ಅಭಿನಯಿಸಿದ್ದ ಅಮಿತ್ ಕಶ್ಯಪ್ ಈ ಧಾರಾವಾಹಿಯಲ್ಲಿ ಶ್ರೀಕೃಷ್ಣನಾಗಿ ಅಭಿನಯಿಸಿದ್ದಾರೆ. ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ ಖ್ಯಾತಿಯ ರಾಧಿಕಾ ರಾವ್ ನಾಯಕಿ ರಾಧಾಳಾಗಿ ನಟಿಸಿದ್ದಾರೆ.