ಕರ್ನಾಟಕ

karnataka

By

Published : Feb 2, 2022, 12:40 PM IST

ETV Bharat / sitara

ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಬಿಡುಗಡೆ ಮುಹೂರ್ತ ಫಿಕ್ಸ್​​

ರಾಧೆ ಶ್ಯಾಮ್ ಚಿತ್ರವನ್ನು ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಈ ಚಿತ್ರ ಬಿಡುಗಡೆಯಾಗಲಿದೆ..

Prabhas, Pooja Hegde
ಪ್ರಭಾಸ್-ಪೂಜಾ ಹೆಗ್ಡೆ

ಮುಂಬೈ (ಮಹಾರಾಷ್ಟ್ರ) :ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ರೋಮ್ಯಾಂಟಿಕ್ ಸಿನಿಮಾ 'ರಾಧೆ ಶ್ಯಾಮ್' ಮಾರ್ಚ್ 11ರಂದು ಬಿಡುಗಡೆಯಾಗಲಿದೆ. ಜನವರಿ 14ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್-19 ಉಲ್ಬಣದಿಂದ ಮುಂದೂಡಲಾಗಿತ್ತು.

ಬುಧವಾರ ಚಿತ್ರದ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್‌ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ರಾಧಾ ಕೃಷ್ಣಕುಮಾರ್ ನಿರ್ದೇಶನದ ಈ ಸಿನಿಮಾದ ಹೊಸ ಪೋಸ್ಟರ್ ಜತೆಗೆ ಹೊಸ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರ ಮಧುರವಾದ ಪ್ರೇಮಕಥೆ ಮಾ.11ರಂದು ಥಿಯೇಟರ್‌ಗಳಿಗೆ ಬರಲಿದೆ ಎಂದು ಟ್ವೀಟ್​​ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಲವರ್ ಬಾಯ್ 'ಹಸ್ತಸಾಮುದ್ರಿಕ ಶಾಸ್ತ್ರದ ಐನ್‌ಸ್ಟೈನ್' 'ವಿಕ್ರಮ್ ಆದಿತ್ಯ' ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಅವರ ಪ್ರೇಮಕಥೆಯ ಜತೆಗೆ, ವಿನಾಶದ ಒಂದು ನೋಟವನ್ನು ಸಹ ಸಿನಿಮಾ ಹೊಂದಿದೆ. ಚಿತ್ರದಲ್ಲಿ ಬಾಲಿವುಡ್​​​ನ ಹಿರಿಯ ನಟಿ ಭಾಗ್ಯಶ್ರೀ ಕೂಡ ನಟಿಸುತ್ತಿದ್ದು, ಪ್ರಭಾಸ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಭಾಸ್-ಪೂಜಾ ಹೆಗ್ಡೆ

ರಾಧೆ ಶ್ಯಾಮ್ ಚಿತ್ರವನ್ನು ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಈ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:Radhe - Shyam: ಕೊರೊನಾ ಹಿನ್ನೆಲೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆ

ABOUT THE AUTHOR

...view details