85 ದಿನಗಳ ಬಿಗ್ ಬಾಸ್ ರಿಯಾಲಿಟಿ ಶೋ ಜರ್ನಿಯನ್ನು ನಟಿ ನಿಧಿ ಸುಬ್ಬಯ್ಯ ಅಂತ್ಯಗೊಳಿಸಿದ್ದಾರೆ. ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ಎಲಿಮಿನೇಟ್ ಸ್ಪರ್ಧಿಯಾಗಿ ನಿಧಿ ಮನೆಯಿಂದ ಹೊರಬಂದಿದ್ದಾರೆ. ಮನೆಯಿಂದ ಹೊರ ಬರುವ ಮುನ್ನ ಕೆ.ಪಿ. ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ನಾಮಿನೇಟ್ ಆಗಿದ್ದ ಏಳು ಮಂದಿಯಲ್ಲಿ ದಿವ್ಯಾ ಸುರೇಶ್ ಮೊದಲಿಗೆ ಸೇಫ್ ಆದರು. ನಂತರ ಮಂಜು, ಪ್ರಿಯಾಂಕಾ, ಪ್ರಶಾಂತ್, ರಘು, ಚಕ್ರವರ್ತಿ ಸೇಫ್ ಆಗಿ ಉಳಿದರು. ನಿಧಿ ಸುಬ್ಬಯ್ಯ ಅಂತಿಮವಾಗಿ ಎಲಿಮಿನೇಟ್ ಆದರು. ನಂತರ ವೇದಿಕೆ ಮೇಲೆ ಬಂದ ನಿಧಿ ತಮ್ಮ ಬಿಗ್ಬಾಸ್ ಜರ್ನಿಯ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಸುದೀಪ್ ಅವರೊಂದಿಗೆ ಹಂಚಿಕೊಂಡರು. ಮನೆಯಲ್ಲಿ ಎಲ್ಲರೂ ಮುಖವಾಡ ಹಾಕಿಕೊಂಡು, ನಾಟಕ ಮಾಡಿಕೊಂಡು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ನಾನು ಆ ರೀತಿ ಮಾಡಲಿಲ್ಲ ಹಾಗಾಗಿ, ಹೊರಬಂದೆ ಅಂತಾ ಹೇಳಿದ್ರು.