ಬೆಂಗಳೂರು: ಜೊತೆ ಜೊತೆಯಲಿ ಸೀರಿಯಲ್ ನಿರ್ದೇಶಕ ಆರೂರು ಜಗದೀಶ್ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸಂಗತಿ ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಗದೀಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ನೆಚ್ಚಿನ ನಿರ್ದೇಶಕರು ಆದಷ್ಟು ಬೇಗ ಗುಣಮುಖ ಆಗುವಂತೆ ಅಭಿಮಾನಿಗಳು ಹಾರೈಸಿದ್ದರು.
ಆಸ್ಪತ್ರೆಯಿಂದ ಮನೆಗೆ ಮರಳಿದ 'ಜೊತೆ ಜೊತೆಯಲಿ' ಧಾರಾವಾಹಿ ನಿರ್ದೇಶಕ - ಜೊತೆ ಜೊತೆಯಲಿ
ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಅರೂರು ಜಗದೀಶ್ "ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಇದೀಗ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಆರೋಗ್ಯ ಚೇತರಿಸುತ್ತಿದೆ. ನಿಮ್ಮೆಲ್ಲರ ಹಾರೈಕೆಗೆ ನನ್ನ ಹೃದಯ ತುಂಬಿದೆ" ಎಂದು ಬರೆದುಕೊಂಡಿದ್ದಾರೆ.
ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಅರೂರು ಜಗದೀಶ್ "ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಇದೀಗ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಆರೋಗ್ಯ ಚೇತರಿಸುತ್ತಿದೆ. ನಿಮ್ಮೆಲ್ಲರ ಹಾರೈಕೆಗೆ ನನ್ನ ಹೃದಯ ತುಂಬಿದೆ. ನಿಮ್ಮೆಲ್ಲರ ಹೃದಯಪೂರ್ವಕ ಹಾರೈಕೆಗಳು ನನ್ನಲ್ಲಿ ಸಕಾರಾತ್ಮಕ ಸಂಚಲನ ಮೂಡಿಸುತ್ತಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ಸ್ವಲ್ಪ ಸುಸ್ತಿದೆ, ಕೆಲ ದಿನಗಳ ನಂತರ ನಿಮ್ಮೆಲ್ಲರ ಜೊತೆ ಮಾತನಾಡುತ್ತೇನೆ. ಇದರೊಂದಿಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ಕಾಪಾಡಿಕೊಳ್ಳಿ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ " ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಕಿರುತೆರೆ ಇತಿಹಾಸದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ಆರೂರು ಜಗದೀಶ್ ಗುಪ್ತಗಾಮಿನಿ, ಶುಭವಿವಾಹ, ಜೋಡಿಹಕ್ಕಿಯಂತಹ ಹಿಟ್ ಸೀರಿಯಲ್ ಗಳನ್ನು ಕಿರುತೆರೆಗೆ ನೀಡಿದ್ದಾರೆ.