ಮಿಮಿಕ್ರಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ವೇಣುಮಾಧವ್ ಎಸ್.ವಿ. ಕೃಷ್ಣಾರೆಡ್ಡಿ ನಿರ್ದೇಶನದ 'ಸಂಪ್ರದಾಯಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ವೇಣುಮಾಧವ್ ನಂತರ ಅನೇಕ ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡರು. ಸುಮಾರು 600ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲ ಕಾಲದಿಂದ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯ ಕಾಡಿದ ಕಾರಣ ಅವರು ಚಿತ್ರಗಳನ್ನು ನಟಿಸುವುದು ನಿಲ್ಲಿಸಿದ್ದರು.
ಎಲ್ಲರನ್ನೂ ನಗಿಸುವ ವೇಣು ಮಾಧವ್ ಕೊನೆಗೂ ಕಣ್ಣೀರು ಹಾಕಿಸಿದ್ರು: ನಟ ರಾಜಶೇಖರ್! - ಹೈದರಾಬಾದ್ ವೇಣು ಮಾಧವ್ ಸುದ್ದಿ
ತೆಲುಗು ಚಿತ್ರರಂಗದ ಖಾತ್ಯ ಹಾಸ್ಯನಟ ವೇಣುಮಾಧವ್ ಸಿಕಿಂದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಕೊನೆಯುಸಿರೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಡಪ ಜಿಲ್ಲೆಯ ಸೂರ್ಯ ಪೇಟೆಯಲ್ಲಿ ಜನಿಸಿ ಖ್ಯಾತ ಹಾಸ್ಯನಟರಾಗಿ ತೆಲುಗು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ವೇಣುಮಾಧವ್ ಕೊನೆಗೂ ನಮ್ಮೆಲ್ಲರನ್ನು ಬಿಟ್ಟು ಹೋದರು ಎಂದು ನಟ ರಾಜಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಲಿವುಡ್ನಲ್ಲಿ ಅತ್ಯಧಿಕ ಬೇಡಿಕೆ ಇರುವ ಹಾಸ್ಯನಟರಲ್ಲಿ ವೇಣು ಮಾಧವ್ ಕೂಡಾ ಒಬ್ಬರು. ಇವರ ನಿಧನಕ್ಕೆ ಚಿತ್ರರಂಗವೇ ಕಂಬನಿ ಮಿಡಿದಿದೆ. ತೆಲುಗು ನಟ ರಾಜಶೇಖರ್ ಇತ್ತೀಚೆಗೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕ್ಯಾಪ್ಷನ್ ಬರೆದಿದ್ದಾರೆ. ನಾವು ಅವರ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದೇವೆ. ಅವರು ಬಹಳ ಒಳ್ಳೆಯ ವ್ಯಕ್ತಿ ಆಗಿದ್ದರು. ಇಷ್ಟು ಬೇಗ ಅವರು ನಮ್ಮನ್ನೆಲ್ಲ ಬಿಟ್ಟು ಹೋಗ್ತಾರೆಂದು ತಿಳಿದಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಶೇಖರ್ ಸಂತಾಪ ಸೂಚಿಸಿದ್ದಾರೆ. ವೇಣುಮಾಧವ್ ನಿಧನಕ್ಕೆ ಸಿನಿರಂಗ ಸೇರಿದಂತೆ ರಾಜಕೀಯ ನಾಯಕರು ಸಹ ಕಂಬನಿ ಮಿಡಿದಿದ್ದಾರೆ.