ಕರ್ನಾಟಕ

karnataka

ETV Bharat / sitara

ಬಣ್ಣದ ಲೋಕದಲ್ಲಿ ಮುದ್ದಾದ ಗುಳಿ ಕೆನ್ನೆಯ ಮುದ್ದು ಕಂದ! - ಗುಳಿ ಕೆನ್ನೆಯ ಮುದ್ದು ಕಂದ

ಅರಳು ಹುರಿದಂತೆ ಪಟಪಟನೆ ಮಾತನಾಡುವ ಈಕೆ ಗುಳಿ ಕೆನ್ನೆಯ ಶ್ರೀತಾ. ಚಿಕ್ಕ ವಯಸ್ಸಿನಲ್ಲೇ ಕಲೆಯನ್ನು ಅದ್ಭುತವಾಗಿ ಮೈಗೂಡಿಸಿಕೊಂಡಿದ್ದಾಳೆ.

child-artist-shreetha

By

Published : Sep 23, 2019, 2:55 AM IST

ಅರಳು ಹುರಿದಂತೆ ಪಟಪಟನೆ ಮಾತನಾಡುವ ಈಕೆ ಗುಳಿಕೆನ್ನೆಯ ಮುದ್ದು ಅಪ್ಸರೆ! ಸ್ವರ್ಗ ಲೋಕದ ಕಿನ್ನರಿಯೇ ನಮ್ಮ ಮುಂದೆ ಬಂದು ನಿಂತಳೇನೋ ಎಂದು ಒಂದು ಕ್ಷಣ ಅನ್ನಿಸಿಬಿಡುವುದೇನೋ!

ಮುದ್ದು ಗುಮ್ಮ ಅಂಜಲಿ ಎಂದೇ ಜನಪ್ರಿಯವಾಗಿರುವ ಈ ಕಂದನ ಹೆಸರು ಶ್ರೀತಾ. ಜನಪ್ರಿಯ ಧಾರಾವಾಹಿ ಅಮೃತ ವರ್ಷಿಣಿಯಲ್ಲಿ ಅಮೃತಳ ಮಗಳು ಅಮೂಲ್ಯ ಪಾತ್ರದಲ್ಲಿ ನಟನಾ ಲೋಕಕ್ಕೆ ಪರಿಚಿತಳಾದಳು.

ಕಿರುತೆರೆ ಬಾಲ ನಟಿ ಶ್ರೀತಾ

ಬಳಿಕ ಅಂಜಲಿ ಧಾರಾವಾಹಿಯಲ್ಲಿ ಮುದ್ದು ಗುಮ್ಮನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಳು. ಅಲ್ಲದೆ, ಮಕ್ಕಳ ಮೆಚ್ಚುಗೆಯ ಅಂಜಲಿಯಾದಳು. ಅಂಜಲಿಯನ್ನು ನೋಡಿದ ಮಕ್ಕಳಿಗೆ ಗುಮ್ಮನ ಬಗೆಗಿದ್ದ ಭಯ ಮಾಯವಾದದ್ದು ಸುಳ್ಳಲ್ಲ. ಮುಂದೆ ಮಹಾದೇವಿ ಧಾರಾವಾಹಿಯಲ್ಲಿ ಹಿರಣ್ಮಯಿ ಪಾತ್ರಕ್ಕೆ ಜೀವ ತುಂಬಿ ಎಲ್ಲರ ಮನ ಗೆದ್ದಳು.

ಶ್ರೀತಾ

ಈಕೆಯ ಪ್ರತಿಭೆ ಕೇವಲ ನಟನೆಗೆ ಮಾತ್ರ ಸೀಮಿತವಲ್ಲ. ಅದ್ಭುತ ನೃತ್ಯಗಾರ್ತಿಯೂ ಕೂಡ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್​​ನಲ್ಲಿ ಭಾಗವಹಿಸಿ ಅಲ್ಲೂ ಪ್ರೇಕ್ಷಕರನ್ನು ರಂಜಿಸಿದಳು.

ಈ ಪೋರಿಗೆ ರಾಧಿಕಾ ಪಂಡಿತ್, ಯಶ್, ಸುದೀಪ್ ಎಂದರೆ ತುಂಬಾ ಇಷ್ಟವಂತೆ. ನಾನು ಕೂಡಾ ರಾಧಿಕಾ ಪಂಡಿತ್​​ರಂತೆ ನಟಿಯಾಗಬೇಕೆಂದು ನಗು ನಗುತ್ತಾ ಹೇಳುವ ಶ್ರಿತಾಗೆ ಪ್ರಾಣಿಗಳೆಂದರೆ ವಿಶೇಷ ಪ್ರೀತಿ. ಒಂದು ವೇಳೆ ಬಣ್ಣದ ಲೋಕಕ್ಕೆ ಕಾಲಿಡದಿದ್ದರೆ ದೊಡ್ಡವಳಾದಾಗ ವೆಟರ್ನರಿ ಡಾಕ್ಟರ್ ಆಗುತ್ತಿದ್ದಳಂತೆ!

ABOUT THE AUTHOR

...view details