ಕರ್ನಾಟಕ

karnataka

By

Published : Jan 3, 2020, 7:12 PM IST

ETV Bharat / sitara

ಕಾಮಿಡಿ ಶೋ ಕಲಾವಿದರ ಆಸೆ ಪೂರೈಸಿದ ಚಾಲೆಂಜಿಂಗ್ ಸ್ಟಾರ್​​​​​​​​​​​​​​​​​​​..!

ಬಹಳಷ್ಟು ಸಿನಿಮಾ ಸ್ನೇಹಿತರ ಬೆಳವಣಿಗೆಗೆ ಕಾರಣ ಆಗಿರುವ ದರ್ಶನ್​​​​ ಈಗಷ್ಟೇ ನಟನೆಗೆ ಕಾಲಿಡುವವರಿಗೆ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. ಖಾಸಗಿ ಚಾನೆಲ್​​​​​​​​​​​​​​​​ವೊಂದರಲ್ಲಿ ನಡೆಯುತ್ತಿರುವ ಕಾಮಿಡಿ ಶೋನಲ್ಲಿ ಮೊದಲ ಬಾರಿಗೆ ದರ್ಶನ್ ಸುಮಾರು 20ನಿಮಿಷಗಳ ಕಾಲ ದರ್ಶನ ಕೊಡುತ್ತಿದ್ದಾರೆ.

Challanging star
ಚಾಲೆಂಜಿಂಗ್ ಸ್ಟಾರ್

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್​​​​​​​​​​​​​​​​​​​​​ ದರ್ಶನ್ ಕೂಡಾ ಒಬ್ಬರು. ದೊಡ್ಡ ಸ್ಟಾರ್ ಆದರೂ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ದರ್ಶನ್ ಆ ಕಾರಣದಿಂದಲೇ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.

ಕಾಮಿಡಿ ಶೋನಲ್ಲಿ ಅತಿಥಿಯಾಗಿ ದರ್ಶನ್

ಬಹಳಷ್ಟು ಸಿನಿಮಾ ಸ್ನೇಹಿತರ ಬೆಳವಣಿಗೆಗೆ ಕಾರಣ ಆಗಿರುವ ದರ್ಶನ್​​​​ ಈಗಷ್ಟೇ ನಟನೆಗೆ ಕಾಲಿಡುವವರಿಗೆ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. ಖಾಸಗಿ ಚಾನೆಲ್​​​​​​​​​​​​​​​​ವೊಂದರಲ್ಲಿ ನಡೆಯುತ್ತಿರುವ ಕಾಮಿಡಿ ಶೋನಲ್ಲಿ ಮೊದಲ ಬಾರಿಗೆ ದರ್ಶನ್ ಸುಮಾರು 20ನಿಮಿಷಗಳ ಕಾಲ ದರ್ಶನ ಕೊಡುತ್ತಿದ್ದಾರೆ. ಈ ಶೋನಲ್ಲಿ ಭಾಗವಹಿಸಲು ಪ್ರಮುಖ ಕಾರಣ ಆ ವಾಹಿನಿಯಲ್ಲಿ ಪ್ರಸಾರವಾದ 'ಕುರುಕ್ಷೇತ್ರ' ಸಿನಿಮಾಗೆ ಹೆಚ್ಚು ರೇಟಿಂಗ್ ದೊರೆತಿರುವುದು. ಅಲ್ಲದೆ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ದರ್ಶನ್ 'ರಾಬರ್ಟ್' ಚಿತ್ರದ ಡಬ್ಬಿಂಗ್​​ನಲ್ಲಿ ಬ್ಯುಸಿಯಿದ್ದಾರೆ. ಅದೇ ಸ್ಟುಡಿಯೋ ಪಕ್ಕದಲ್ಲಿ ನವರಸ ನಾಯಕ ಜಗ್ಗೇಶ್, ರಕ್ಷಿತಾ ತೀರ್ಪುಗಾರರಾಗಿ ಭಾಗವಹಿಸುತ್ತಿರುವ ಕಾಮಿಡಿ ಶೋ ಶೂಟಿಂಗ್ ಕೂಡಾ ಜರುತ್ತಿದೆ. ಹತ್ತಿರದಲ್ಲೇ ಇದ್ದಿದ್ದರಿಂದ ದರ್ಶನ್ ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ.

ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿರುವ ಬಹುತೇಕ ಕಲಾವಿದರು ದರ್ಶನ್ ಅಭಿಮಾನಿಗಳು. ಬಹಳ ದಿನಗಳ ಹಿಂದೆ ನಟಿ ರಕ್ಷಿತಾ ಕೂಡಾ ದರ್ಶನ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆತರುತ್ತೇನೆ ಎಂದು ಹೇಳಿದ್ದರಂತೆ. ಜಗ್ಗೇಶ್ ಹಾಗೂ ರಕ್ಷಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕಾರ್ಯಕ್ರಮದ ಕಲಾವಿದರು ಕೂಡಾ ತಮ್ಮ ಮೆಚ್ಚಿನ ನಟನನ್ನು ಹತ್ತಿರದಿಂದ ನೋಡಿದ ಖುಷಿಯಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details