ಲಾಸ್ ಏಂಜೆಲೀಸ್: ತಮ್ಮ ಹಾಗೂ ಜಸ್ಟಿನ್ ಟಿಂಬರಲೇಕ್ ಮಧ್ಯದ ಸಂಬಂಧ ಮುರಿದು ಬಿದ್ದ ಘಟನೆ ಜಗತ್ತಿನ ಅತಿ ದೊಡ್ಡ ಲವ್ ಬ್ರೇಕಪ್ಗಳಲ್ಲೊಂದು ಎಂದು ಪಾಪ್ ಸ್ಟಾರ್ ಬ್ರಿಟ್ನಿ ಸ್ಪೀಯರ್ಸ್ ಹೇಳಿದ್ದಾರೆ.
ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಬ್ರಿಟ್ನಿ, "ಇದು ನನ್ನ ಸ್ನ್ಯಾಪ್ಚಾಟ್ ಅಥವಾ ಟಿಕ್ಟೋಕ್" ಎಂದು ಬರೆದುಕೊಂಡಿದ್ದಾರೆ. ಜಸ್ಟಿನ್ ಟಿಂಬರಲೇಕ್ ಅವರ "ಫಿಲ್ದಿ" ಹಾಡಿಗೆ ಬ್ರಿಟ್ನಿ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದೆ. ಹಾಡಿನ ತಾಳಕ್ಕೆ ಹೆಜ್ಜೆ ಹಾಕುತ್ತ ಡಾನ್ಸ್ ಮಾಡಿದ್ದು ಕಾಣುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಮನೆಯಲ್ಲೇ ಈ ವಿಡಿಯೋ ಶೂಟ್ ಮಾಡಲಾಗಿದೆ.
ವಿಡಿಯೋ ಕ್ಯಾಪ್ಷನ್ ಮುಂದುವರಿಸಿರುವ ಅವರು, "ಇದು ನನ್ನ ಸ್ನ್ಯಾಪ್ಚಾಟ್ ಅಥವಾ ಟಿಕ್ಟೋಕ್ ಅಥವಾ ಈಗಿನ ಸಮಯದಲ್ಲಿ ಮಾಡಬಹುದಾದ ಯಾವುದೋ ಕೂಲ್ ಕೆಲಸ ಎಂದುಕೊಳ್ಳಿ. ನಿಮಗೆ ಗೊತ್ತಾ? ನಾನು ಡಾನ್ಸ್ ಮಾಡುತ್ತಿಲ್ಲ... ನಿಜವಾಗಿಯೂ ನನಗೆ ಬೋರ್ ಆಗಿದೆ." ಎಂದು ಬರೆದಿದ್ದಾರೆ.