ಬಿಗ್‌ಬಾಸ್ ಸೀಸನ್-8ಕ್ಕೆ ಮುಹೂರ್ತ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ನಿಮ್ಮ ಮುಂದೆ ಪ್ರಸಾರವಾಗಲಿದೆ.
ಫೆಬ್ರವರಿಯಲ್ಲಿ ಬರಲಿದೆಯಂತೆ ಬಿಗ್‌ಬಾಸ್ ಸೀಸನ್-8 - ಬಿಗ್‌ಬಾಸ್ ಸೀಸನ್ 8
ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ನಿಮ್ಮ ಮುಂದೆ ಪ್ರಸಾರವಾಗಲಿದೆ.
ಹೌದು, ಅಂತೆ ಕಂತೆಗಳಿಗೆ ವಿರಾಮ ಇಡಲು ಮುಂದಾಗಿರುವ ಕಲರ್ಸ್ ವಾಹಿನಿ ಶೀಘ್ರವೇ ಆರಂಭಿಸುವ ಮುನ್ಸೂಚನೆ ನೀಡಿದೆ. ಕಳೆದ ಎರಡು ತಿಂಗಳಿಂದ ಹರಿದಾಡುತ್ತಿರುವ ಸುದ್ದಿಗೆ ವಾಹಿನಿಯ ಮುಖ್ಯಸ್ಥರಿಂದಲೇ ಉತ್ತರ ಬಂದಿದೆ. ಬಿಗ್‌ಬಾಸ್ ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿಯೇ ಬಿಗ್‌ಬಾಸ್ ಸೀಸನ್-8 ಲಾಂಚ್ ಆಗಲಿದೆ ಎನ್ನಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಪ್ರೋಮೊ ಬಿಡುಗಡೆ ಆಗಲಿದ್ದು, ಅದೇ ದಿನವೇ ಬಿಗ್‌ಬಾಸ್ ಲಾಂಚ್ ದಿನಾಂಕವೂ ಘೋಷಣೆ ಆಗಲಿದೆ. ಕಿಚ್ಚ ಸುದೀಪ್ ತಮ್ಮ ಹಳೆಯ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಕಾಫಿ ಕಪ್ ಹಿಡಿದು ಪ್ರೋಮೊ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಬರೆದುಕೊಂಡಿದ್ದರು. ಸೀಸನ್-8ರಲ್ಲಿ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಎಲ್ಲರ ಕುತೂಹಲವಾಗಿದೆ.