ಕರ್ನಾಟಕ

karnataka

ETV Bharat / sitara

ಪುಸ್ತಕ ಮೇಳದಲ್ಲಿ ಪಿಕ್​ ಪಾಕೆಟಿಂಗ್​​.. ಖ್ಯಾತ ಟಾಲಿವುಡ್​​ ನಟಿ ಬಂಧನ - ಪುಸ್ತಕ ಮೇಳದಲ್ಲಿ ಪಿಕ್​ ಪ್ಯಾಕೆಟಿಂಗ್​

Bengali-TV actress Rupa Dutta arrested on pick pocketing.. ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಜೇಬುಗಳ್ಳತನ ಆರೋಪದ ಮೇಲೆ ಬಂಗಾಳಿ, ಕಿರುತೆರೆ ನಟಿ ರೂಪಾ ದತ್ತಾ ಎಂಬುವರನ್ನು ಬಂಧಿಸಲಾಗಿದೆ.

actress-rupa-dutta-arrested-for-alleged-pickpocketing-at-international-kolkata-book-fair
ಖ್ಯಾತ ಟಾಲಿವುಡ್​​ ನಟಿ ಬಂಧನ

By

Published : Mar 13, 2022, 5:51 PM IST

ಕೋಲ್ಕತ್ತಾ:ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಬಂಗಾಳಿ, ಕಿರುತೆರೆ ನಟಿ ರೂಪಾ ದತ್ತಾ ಎಂಬುವರನ್ನು ಬಂಧಿಸಲಾಗಿದೆ. ಜೇಬುಗಳ್ಳತನ ಆರೋಪದ ಮೇಲೆ ನಿನ್ನೆ ಸಂಜೆ ನಟಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗಾಳಿ ನಟಿ ರೂಪಾ ದತ್ತಾ ಟಾಲಿವುಡ್ ಚಲನಚಿತ್ರಗಳು ಮತ್ತು ಬಾಲಿವುಡ್ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನಟಿ ಬಿಧಾನನಗರ ಉತ್ತರ ಠಾಣೆ ಪೊಲೀಸರ ವಶದಲ್ಲಿದ್ದಾರೆ.

ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಸಿಬ್ಬಂದಿಯು ಅನುಮಾನದ ಮೇಲೆ ನಟಿಯ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಡಸ್ಟ್‌ಬಿನ್‌ಗೆ ಚೀಲವನ್ನು ಎಸೆಯುತ್ತಿರುವುದನ್ನು ನೋಡಿದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆಕೆಯ ಬ್ಯಾಗ್​ನಲ್ಲಿ ಹಲವು ಪರ್ಸ್​, ವ್ಯಾಲೆಟ್‌ಗಳಿರುವುದು ಪತ್ತೆಯಾಗಿದೆ. ನಂತರ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಬಂಧಿತಳ ಹೆಸರು ರೂಪಾ ದತ್ತಾ ಆಗಿದ್ದು, ವೃತ್ತಿಯಲ್ಲಿ ನಟಿ ಎಂಬ ವಿಚಾರ ಪೊಲೀಸರಿಗೆ ತಿಳಿದಿದೆ.

ನಟಿ ರೂಪಾ ಜೇಬುಗಳ್ಳತನ ಮಾಡುವುದಕ್ಕಾಗಿಯೇ ಜನನಿಬಿಡ ಪ್ರದೇಶಗಳು, ಜಾತ್ರೆ ಮತ್ತು ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಪುಸ್ತಕ ಮೇಳಕ್ಕೆ ಕೂಡ ಅದೇ ಉದ್ದೇಶಕ್ಕಾಗಿಯೇ ಬಂದಿದ್ದರು. ಅವರಿಂದ 75 ಸಾವಿರ ರೂ. ಡೈರಿ ಸಿಕ್ಕಿದ್ದು, ಅದರಲ್ಲಿ ಜೇಬುಗಳ್ಳತನದ ಲೆಕ್ಕವನ್ನು ಬರೆಯಲಾಗಿದೆ. ನಟಿಯೊಬ್ಬರು ಯಾಕೆ ಇಂತಹ ಕೃತ್ಯಕ್ಕೆ ಇಳಿದಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ರೂಪಾ ದತ್ತಾ ಹಲವು ಜನಪ್ರಿಯ ಟಾಲಿವುಡ್ ಚಲನಚಿತ್ರಗಳು ಮತ್ತು ಬಾಲಿವುಡ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ದೂರದರ್ಶನದ ಪರದೆಯಲ್ಲಿ ಚಿರಪರಿಚಿತ ಮುಖವಾಗಿದ್ದಾರೆ. ರೂಪಾ ದತ್ತಾ 2005ರ ಟಾಲಿವುಡ್ ಚಲನಚಿತ್ರ 'ಸತಿ'ಯಲ್ಲಿ ನಟಿಸಿದ್ದರು. ಬಳಿಕ ಮುಂಬೈಗೆ ಹಾರಿದ ಅವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details