ಕರ್ನಾಟಕ

karnataka

ETV Bharat / sitara

Bigg Boss Season 8: ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎಲಿಮನೇಟ್​ ಇವರೇ! - ಚಕ್ರವರ್ತಿ ಚಂದ್ರಚೂಡ್

Bigg Boss Season 8ರ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದ್ದು, ನಿಧಿ ಸುಬ್ಬಯ್ಯ ಶೋ ನಿಂದ ಔಟ್​ ಆಗಿದ್ದಾರೆ.

ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ

By

Published : Jul 4, 2021, 6:32 AM IST

ಬಿಗ್​ಬಾಸ್ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ನಿಧಿ ಸುಬ್ಬಯ್ಯ ಎಲಿಮಿನೆಟ್ ಆಗಿದ್ದಾರೆ. ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಅದರೆ ಈ ವಾರ ಎಲಿಮಿನೇಷನ್ ಪಕ್ಕಾ ಎಂದು ಸುದೀಪ್‌ ಸ್ಪಷ್ಟಪಡಿಸಿದ್ದರು. ಅದರಂತೆ ನಾಮಿನೇಟ್ ಆಗಿದ್ದ ಏಳು ಮಂದಿಯಲ್ಲಿ ನಟಿ ನಿಧಿ ಸುಬ್ಬಯ್ಯ ಬಿಗ್​ ಮನೆಯಿಂದ ಹೊರಬರುತ್ತಿದ್ದಾರೆ.

ನಿಧಿ ಸುಬ್ಬಯ್ಯ

ಚಕ್ರವರ್ತಿ ಚಂದ್ರಚೂಡ್ ಸೇಫ್ ಆಗಿದ್ದಾರೆ‌ ಎಂದು ಮೂಲಗಳು ತಿಳಿಸಿವೆ. ಈ ವಾರ ಟಾಸ್ಕ್​ಗಳಲ್ಲಿ ನಿಧಿ ಹೆಚ್ಚಿನ ಉತ್ಸಾಹ ಹಾಗೂ ಶ್ರಮ ಹಾಕಿದರು. ಆದರೆ ಟೈ ಆಗಿದ್ದ ಟಾಸ್ಕ್​ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನುಳಿದಂತೆ ಅರವಿಂದ್ ಹಾಗೂ ಶುಭ ಪೂಂಜ ಜೊತೆ ನಿಧಿ ಮಾತಿನ ಚಕಮಕಿ ನಡೆಸಿದ್ದರು.

ಇದನ್ನು ಓದಿ:ವಿನಯ್ ಗುರೂಜಿಯಿಂದ ಧ್ರುವ ಸರ್ಜಾಗೆ ಉಡುಗೊರೆ... ಆ್ಯಕ್ಷನ್ ಪ್ರಿನ್ಸ್​ ಫುಲ್ ಖುಷ್

ಅರವಿಂದ ಅವರು ಕ್ರೀಡಾ ವಲಯದಿಂದ ಬಂದಿದ್ದರೂ, ಕ್ರೀಡಾಸ್ಫೂರ್ತಿ ಇಲ್ಲ. ನಿಮ್ಮ ಮೆಡಲ್ ತೋರಿಸಿ ಎಂದು ಅರವಿಂದ್ ಅವರಿಗೆ ಸವಾಲು ಹಾಕಿದ್ದರು. ಈ ಬಗ್ಗೆ ಸುದೀಪ್ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ನಿಧಿ ಅವರಿಗೆ‌ ಕಿವಿ‌ಮಾತು ಹೇಳಿದ್ದರು.

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು, ಪ್ರಶಾಂತ್, ಚಕ್ರವರ್ತಿ, ಮಂಜು, ಅರವಿಂದ್ ಹಾಗೂ ನಿಧಿ ಅವರುಗಳಿಗೆ ಬುದ್ಧಿವಾದ ಹೇಳಿದರು. ನಂತರ ಪ್ರತಿಯೊಬ್ಬರಿಗೂ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ನಿಧಿ ಹಾಗೂ ಅರವಿಂದ್ ಮತ್ತು ಶುಭ ಹಾಗೂ ನಿಧಿ ಪರಸ್ಪರ ಕ್ಷಮೆಯಾಚಿಸುತ್ತಾ ಸಮಸ್ಯೆಯನ್ನು ಬಗೆಹರಿಸಿಕೊಂಡರು. ಎಲಿಮಿನೇಷನ್ ಪ್ರಕ್ರಿಯೆ ಇಂದಿನ(ಭಾನುವಾರ)ದ ಎಪಿಸೋಡ್​ನಲ್ಲಿ ಪ್ರಸಾರವಾಗಲಿದೆ.

ABOUT THE AUTHOR

...view details