ಸಿನಿಮಾ ರಂಗದಲ್ಲಿ ತಾರೆಯರಿಗೆ ಬೇರೆ ನಟರ ಅಭಿಮಾನಿಗಳು, ಅವಾಚ್ಯ ಶಬ್ದ ಬಳಸಿ ನಿಂದಿಸುವುದು ಸಾಮಾನ್ಯವಾಗಿದೆ. ಆಗಾಗ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಸ್ಟಾರ್ ನಟರ ಅಭಿಮಾನಿಗಳ ಮಧ್ಯೆ ಬೇರೆ ನಟರ ಬಗ್ಗೆ ನಿಂದಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಆನೇಕಲ್ ನಗರದ ನಿವಾಸಿ ರವಿಶಂಕರ್ ಎಂಬುವರು ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರಿಗೆ ಅವಾಚ್ಯ ಪದಗಳನ್ನ ಬಳಸಿ ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ರಾಜ್ ಕುಟುಂಬದ ಅಭಿಮಾನಿಗಳ ಸಂಘದ ಗಮನಕ್ಕೆ ಬಂದು, ಈ ವ್ಯಕ್ತಿಯನ್ನ ಹುಡುಕಿ ಕ್ಷಮೆ ಕೇಳಿಸಿದ್ದಾರೆ. ಆನೇಕಲ್ ಜಿಲ್ಲೆಯ ನಿವಾಸಿಯಾಗಿರುವ ರವಿಶಂಕರ್, ಪ್ರಶಸ್ತಿ ಕೊಟ್ಟಿರುವ ವಿಚಾರವಾಗಿ, ಬಾಯಿಗೆ ಬಂದಂತೆ ಮಾತನಾಡಿದ್ದ. ಈಗ ಅಭಿಮಾನಿಗಳ ಕೈಗೆ ಸಿಕ್ಕಿ, ತಾನು ಮಾತನಾಡಿದ್ದು ತಪ್ಪು ಅಂತಾ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ಕ್ಷಮೆ ಕೇಳಿದ್ದಾನೆ.