ಕರ್ನಾಟಕ

karnataka

ETV Bharat / sitara

ವಿಶ್ವದ ಅತ್ಯಂತ ಶ್ರೀಮಂತ ಸಂಗೀತಗಾರ್ತಿಯಾಗಿ ಹೊರಹೊಮ್ಮಿದ ರಿಹಾನ್ನಾ - Pop singer Rihanna

ಗಾಯಕಿ, ನಟಿ, ಫ್ಯಾಷನ್​ ಡಿಸೈನರ್ ಹಾಗೂ ಉದ್ಯಮಿ ಆಗಿರುವ ರಿಹಾನ್ನಾ ಇದೀಗ 1.7 ಬಿಲಿಯನ್ ಡಾಲರ್​ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಸಂಗೀತಗಾರ್ತಿಯಾಗಿದ್ದಾರೆ.

Rihanna
ರಿಹಾನ್ನಾ

By

Published : Aug 5, 2021, 5:06 PM IST

ಭಾರತದ ರೈತರ ಪ್ರತಿಭಟನೆ ಪರವಾಗಿ ಟ್ವೀಟ್​ ಮಾಡಿ ವಿವಾದಕ್ಕೆ ಸಿಲುಕಿದ್ದ ಪಾಪ್​ ಗಾಯಕಿ ರಿಹಾನ್ನಾ ಇದೀಗ ವಿಶ್ವದ ಅತ್ಯಂತ ಶ್ರೀಮಂತ ಸಂಗೀತಗಾರ್ತಿಯಾಗಿ (Worlds Richest Woman Musician) ಹೊರಹೊಮ್ಮಿದ್ದಾರೆ. 'ಫೆಂಟಿ ಬ್ಯೂಟಿ' ಆರಂಭಿಸಿದ ನಾಲ್ಕು ವರ್ಷಗಳಲ್ಲಿ ರಿಹಾನ್ನಾ ಯಶಸ್ವಿ ಉದ್ಯಮಿಯೂ ಆಗಿದ್ದಾರೆ.

ಫೋರ್ಬ್ಸ್ ವರದಿಗಳ ಪ್ರಕಾರ ಪ್ರಪಂಚದಾದ್ಯಂತ ತಮ್ಮ ಗಾಯನದಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿರುವ ರಿಹಾನ್ನಾ ಅವರು 1.7 ಬಿಲಿಯನ್ ಡಾಲರ್​ ಸಂಪತ್ತು (Net Worth) ಹೊಂದಿದ್ದಾರೆ.

ನಟಿ, ಫ್ಯಾಷನ್​ ಡಿಸೈನರ್​ ಕೂಡ ಆಗಿರುವ ರಿಹನ್ನಾ 2017ರ ಸೆಪ್ಟೆಂಬರ್​ನಲ್ಲಿ ಫೆಂಟಿ ಬ್ಯೂಟಿ ಎಂಬ ಸೌಂದರ್ಯವರ್ಧಕಗಳ ಬ್ರಾಂಡ್ ಅನ್ನು ಆರಂಭಿಸಿದ್ದರು. ಇದು ಇವರ ಜೀವನದ ಬಹುದೊಡ್ಡ ಹೆಜ್ಜೆಯಾಗಿದೆ. ಏಕೆಂದರೆ ಇವರ ಸಂಪತ್ತಿನ ಬಹುಪಾಲು ಅಂದರೆ 1.7 ಬಿಲಿಯನ್ ಪೈಕಿ 1.4 ಬಿಲಿಯನ್ ಡಾಲರ್​ ಫೆಂಟಿ ಬ್ಯೂಟಿಯಿಂದಲೇ ಬಂದಿದೆ. ಇನ್ನು ಸುಮಾರು 270 ಮಿಲಿಯನ್‌ ಡಾಲರ್ ಆದಾಯವು ಒಳ ಉಡುಪುಗಳ ಮಾರಾಟ ಉದ್ಯಮದಿಂದ ಬಂದಿದೆ.

ಇದನ್ನೂ ಓದಿ: ಟಾಪ್​​ಲೆಸ್​​ ಮಧ್ಯೆ ಗಣೇಶ​​: ನೆಟ್ಟಿಗರಿಗೆ ಆಹಾರವಾದ ರಿಹಾನ್ನಾ

ಈ ಹಿಂದೆ ರಿಹಾನ್ನಾ, ಭಾರತ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿ ಹಾಗೂ ಇನ್ನೊಮ್ಮೆ ಗುಲಾಬಿ ಬಣ್ಣದ ಚಡ್ಡಿ ಮತ್ತು ವಜ್ರದಿಂದ ಮಾಡಿರುವ ಗಣೇಶನ ಹಾರ ಧರಿಸಿರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ವಿವಾದಕ್ಕೆ ಒಳಗಾಗಿದ್ದರು.

ABOUT THE AUTHOR

...view details