ಜೈಪುರ (ರಾಜಸ್ಥಾನ):ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಾಲಿವುಡ್ನ ಕ್ಯೂಟ್ ಗರ್ಲ್ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ಮುಂಬೈನ ಏರ್ಪೋರ್ಟ್ನಿಂದ ಈ ಜೋಡಿ ವಿಶೇಷ ಹೆಲಿಕಾಪ್ಟರ್ ಮೂಲಕ ಸೋಮವಾರ ರಾತ್ರಿ ರಾಜಸ್ಥಾನಕ್ಕೆ ಬಂದರು.
ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ವಿವಾಹ ಕಾರ್ಯಕ್ರಮ ಡಿಸೆಂಬರ್ 9ರಂದು ನಡೆಯಲಿದೆ. ಇಂದಿನಿಂದ ವಿವಾಹ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಸೋಮವಾರ ರಾತ್ರಿ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮದುವೆ ಹಾಲ್ ತಲುಪಿದ ನೂತನ ಜೋಡಿಗೆ ಹಣೆಗೆ ಕುಂಕುಮ ಹಚ್ಚಿ, ಕೊರಳಿಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ, ಭವ್ಯವಾಗಿ ಸ್ವಾಗತಿಸಲಾಯಿತು. ಇಂದು (ಮಂಗಳವಾರ) ರಾತ್ರಿ ನಡೆಯುವ ಸಂಗೀತ ಸಮಾರಂಭದೊಂದಿಗೆ ವಿಕ್ಕಾಟ್ ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿವೆ.
ಸೋಮವಾರ ಮಧ್ಯಾಹ್ನದಿಂದ ಜೈಪುರ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಒಡಹುಟ್ಟಿದವರು ಮತ್ತು ಸಂಬಂಧಿಕರು, ಸ್ನೇಹಿತರು ಒಬ್ಬರ ನಂತರ ಒಬ್ಬರಂತೆ ಆಗಮಿಸಿದರು. ನಿನ್ನೆ ರಾತ್ರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಜೊತೆ ಹನ್ನೆರಡು ಅತಿಥಿಗಳು ಬಂದಿದ್ದರು.