ಕರ್ನಾಟಕ

karnataka

ETV Bharat / sitara

ಬಾಕ್ಸ್ ಆಫೀಸ್​​​​​​ನಲ್ಲಿ ಧೂಳೆಬ್ಬಿಸಿದ 'ಸೂರ್ಯವಂಶಿ'..100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ - ಹಿಂದಿ ಸೂರ್ಯವಂಶಿ

ಬಹುತಾರಾಗಣದ ಬಾಲಿವುಡ್​ನ 'ಸೂರ್ಯವಂಶಿ'(Suryavanshi) ನ. 05ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ.

Suryavanshi
ಸೂರ್ಯವಂಶಿ

By

Published : Nov 13, 2021, 11:37 AM IST

ಮುಂಬೈ (ಮಹಾರಾಷ್ಟ್ರ): ಅಕ್ಷಯ್ ಕುಮಾರ್( Akshay Kumar), ಕತ್ರಿನಾ ಕೈಫ್(katrina kaif)​, ಅಜಯ್​ ದೇವಗನ್(ajay devgan)​ ಮತ್ತು ರಣವೀರ್​ ಸಿಂಗ್(ranveer singh)​ ನಟಿಸಿರುವ ಬಹುತಾರಾಗಣದ ಬಾಲಿವುಡ್​ನ 'ಸೂರ್ಯವಂಶಿ'(Suryavanshi) ನ. 05ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ.

ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಿ ಹತ್ತು ದಿನಗಳಾಗುತ್ತಾ ಬಂದಿದ್ದು, ಕಲೆಕ್ಷನ್(Suryavanshi collection) ಜೋರಾಗಿಯೇ ಇದೆ. ಅಲ್ಲದೇ ವೀಕೆಂಡ್​ನಲ್ಲಿ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ‌ ಎಂದು ಬಾಕ್ಸ್​​ ಆಫೀಸ್ ಪರಿಣತರು ಭವಿಷ್ಯ ನುಡಿದಿದ್ದಾರೆ. ಚಿತ್ರ ಈವರೆಗೆ ಸುಮಾರು 100 ಕೋಟಿಗೂ ಅಧಿಕ ಆದಾಯ ಗಳಿಸಿದೆ‌.

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ 'ಸೂರ್ಯವಂಶಿ'..100 ಕೋಟಿ ರೂಪಾಯಿ ಕಲೆಕ್ಷನ್

ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 26.29 ಕೋಟಿ ರೂ.ಗಳನ್ನು ಗಳಿಸಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರದಲ್ಲಿ ನಟ ಅಕ್ಷಯ್ ಭಯೋತ್ಪಾದನಾ‌ ನಿಗ್ರಹ ದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರೋಹಿತ್ ಶೆಟ್ಟಿ ನಿರ್ದೇಶನದ ಪೊಲೀಸ್ ಸರಣಿಯ ಮೂರನೇ‌ ಚಿತ್ರವಾಗಿದ್ದು, ಮೊದಲೆರಡು ಚಿತ್ರಗಳ ನಾಯಕರಾದ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದಾರೆ. ಇದು ಚಿತ್ರಕ್ಕೆ ಒಳ್ಳೆಯ ಮೈಲೇಜ್ ನೀಡಿದೆ. ಸೂರ್ಯವಂಶಿ ಚಿತ್ರವು ಸುಮಾರು 165 ಕೋಟಿ ರೂ. ಬಜೆಟ್​​ನಲ್ಲಿ‌ ನಿರ್ಮಾಣವಾಗಿದೆ.

ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ಅಕ್ಷಯ್​ ಕುಮಾರ್​ ಇದೀಗ ತಮ್ಮ ಮುಂಬರುವ ಚಿತ್ರ ''ಅತ್​ರಂಗಿ ರೇ'(Atrangi Re) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ABOUT THE AUTHOR

...view details