ಕರ್ನಾಟಕ

karnataka

ETV Bharat / sitara

ಯಶ್​​ ಪುತ್ರನ ಹೊಸ ಗೆಟಪ್​​ ನೋಡಿ! - ಯಶ್​​ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವನ ಕೇಶ ಮುಂಡನ ಮಾಡಿಸಿದ್ದಾರೆ. ಈ ಫೋಟೋಗಳನ್ನು ನಟಿ ಹಾಗೂ ಯಶ್​ ಪತ್ನಿ ರಾಧಿಕಾ ಪಂಡಿತ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಶ್​​ ಪುತ್ರನ ಹೊಸ ಗೆಟಪ್​​ ನೋಡಿ..!
ಯಶ್​​ ಪುತ್ರನ ಹೊಸ ಗೆಟಪ್​​ ನೋಡಿ..!

By

Published : Jan 5, 2021, 3:25 PM IST

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವನ ಕೇಶ ಮುಂಡನ ಮಾಡಿಸಿದ್ದಾರೆ. ಈ ಫೋಟೋಗಳನ್ನು ನಟಿ ಹಾಗೂ ಯಶ್​ ಪತ್ನಿ ರಾಧಿಕಾ ಪಂಡಿತ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಶ್​​ ಮತ್ತು ಪುತ್ರ ಯಥರ್ವ

ಯಥರ್ವ ಯಶ್ ಹೊಸ ಗೆಟಪ್ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಲೈಕ್​ ಮತ್ತು ಕಮೆಂಟ್​​ ಮಾಡುತ್ತಿದ್ದಾರೆ. ಯಥರ್ವ ಹುಟ್ಟಿ 14 ತಿಂಗಳ ನಂತ್ರ ಕೇಶ ಮುಂಡನ ಮಾಡಿಸಲಾಗಿದೆ. ಇದೇ ಅಕ್ಟೋಬರ್ 30ರಂದು ಮಗನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿದ್ರು. ಈ ಸೆಲೆಬ್ರೇಶನ್​ಗೆ ಕೇವಲ ಕುಟುಂಬದವರು ಮತ್ತು ಯಶ್​​​ ಆಪ್ತರು ಮಾತ್ರ ಭಾಗಿಯಾಗಿದ್ರು.

ಯಶ್​​ ಪುತ್ರ ಯಥರ್ವ

ಕೇಶ ಮುಂಡನ ಕಾರ್ಯಕ್ರಮದಲ್ಲಿ ತಂದೆ ಹಾಗೂ ಮಗ ಇಬ್ಬರೂ ಟ್ರೆಡಿಶನಲ್​ ಲುಕ್​ನಲ್ಲಿ ಮಿಂಚಿದ್ದಾರೆ. ಯಶ್​​ ಪಂಚೆ ಮತ್ತು ಬಿಳಿ ಅಂಗಿಯಲ್ಲಿ ಕಾಣಿಸಿದ್ರೆ, ಯಥರ್ವ್​​​​ ಬಿಳಿ ಪಂಚೆ ಮತ್ತು ಹಸಿರು ಬಣ್ಣದ ಅಂಗಿಯನ್ನು ತೊಟ್ಟಿದ್ದಾನೆ. ತಂದೆಯ ತೋಳಿನಲ್ಲಿರುವ ಯಥರ್ವ​​ ಫೋಟೋಗಳನ್ನು ರಾಧಿಕಾ ಪಂಡಿತ್​​ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಯಶ್​​ ಪುತ್ರಿ ಐರಾ ಕೇಶ ಮುಂಡನವನ್ನು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಮಾಡಲಾಗಿತ್ತು. ಕಳೆದ ವರ್ಷ ಮಾರ್ಚ್​​ನಲ್ಲಿ ಐರಾ ಕೇಶಮುಂಡನ ಮಾಡಿಸಿದ್ದರು. ಇದೀಗ ಪುತ್ರ ಯಥರ್ವ ಕೇಶ ಮುಂಡನ ಮಾಡಿಸಿದ್ದು, ಹೊಸ ಗೆಟಪ್​​ನಲ್ಲಿ ಮಿಂಚುತ್ತಿದ್ದಾನೆ.

ABOUT THE AUTHOR

...view details