ಕರ್ನಾಟಕ

karnataka

By

Published : Oct 9, 2019, 2:24 PM IST

ETV Bharat / sitara

ಅಂಬಿ ತಾತನ ಆಶೀರ್ವಾದ ಪಡೆದ ಯಶ್ ಪುತ್ರಿ... ಐರಾಳನ್ನು ಮುದ್ದಾಡಿದ ಸುಮಲತಾ...!

ವಿಜಯದಶಮಿ ನಿಮಿತ್ತ ನಿನ್ನೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗಳು ಐರಾಳನ್ನು ಸುಮಲತಾ ಅವರಿಗೆ ತೋರಿಸಲು ಅಂಬಿ ಹೊಸ ಮನೆಗೆ ಕರೆದೊಯ್ದಿದ್ದಾರೆ. ಐರಾಳನ್ನು ನೋಡಿದ ಸುಮಲತಾ ಅವಳನ್ನು ಎತ್ತಿ ಮುದ್ದಾಡಿ ಸಂಭ್ರಮಪಟ್ಟಿದ್ದಾರೆ.

ಐರಾ

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾರನ್ನು ತಂದೆ - ತಾಯಿಯಂತೆ ಭಾವಿಸುವ ನಟರ ಸಾಲಿನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡಾ ಒಬ್ಬರು. ಅಂಬರೀಶ್ ಕಣ್ಣು ಮುಚ್ಚುವ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಮಗುವಿಗೆ ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.

ಮಗಳಿಗೆ ಅಂಬರೀಶ್ ಪೋಟೋ ತೋರಿಸುತ್ತಿರುವ ಯಶ್

ಇನ್ನು ಇದುವರೆಗೂ ಸಂಸದೆ ಸುಮಲತಾ ಮಾತ್ರ ಯಶ್ ಮಗಳನ್ನು ನೋಡಿರಲೇ ಇಲ್ಲವಂತೆ. ಒಂದು ಒಳ್ಳೆ ದಿನದಂದು ಯಶ್ ತನ್ನ ಮಗಳನ್ನು ತೋರಿಸುವುದಾಗಿ ಹೇಳಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸ್ವತಃ ಸುಮಲತಾ ಅವರೇ ಹೇಳಿಕೊಂಡಿದ್ದರು. ಕೊನೆಗೂ ಆ ಘಳಿಗೆ ನಿನ್ನೆ ಕೂಡಿ ಬಂದಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ, ಅಂಬರೀಶ್ ಅವರ ಕನಸಿನ‌ ಮನೆಗೆ ಮೊದಲ ಬಾರಿಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಪ್ಪನ‌ ಸಹಾಯದಿಂದ ಅಂಬರೀಶ್ ಅವರ ಫೋಟೋ‌ ಮೇಲೆ ಕೈ ಇಟ್ಟು, ಅಂಬಿ ತಾತನ ಆಶೀರ್ವಾದ ಪಡೆದಿದ್ದಾಳೆ ಐರಾ. ಇನ್ನು ಸುಮಲತಾ ಅಂಬರೀಶ್ ಕೂಡಾ ಐರಾಳನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಐರಾಳನ್ನು ಎತ್ತಿ ಮುದ್ದಾಡಿ ಅವಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಐರಾಳನ್ನು ಮುದ್ದಾಡುತ್ತಿರುವ ಸುಮಲತಾ
ಸುಮಲತಾ ಜೊತೆ ಐರಾ, ರಾಧಿಕಾ ಪಂಡಿತ್​​​, ಯಶ್​​

ABOUT THE AUTHOR

...view details