ಈ ಫೋಟೋ ನೋಡಿ ನನ್ನ ಅಪ್ಪ ಅಮ್ಮನನ್ನು ಬೈಯ್ಯಬೇಡಿ ಎಂದು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ. ಇದೇನು? ಆರ್ಜಿವಿ ತಂದೆ-ತಾಯಿ ಇಬ್ಬರನ್ನೂ ಬೈಯ್ಯುವಂತ ತಪ್ಪು ಏನು ಮಾಡಿದರು ಎಂದು ಕನ್ಫ್ಯೂಸ್ ಆಗಬೇಡಿ.
ಆರ್ಜಿವಿ ನಿನ್ನೆ ತಮ್ಮ ಟ್ವಿಟರ್ನಲ್ಲಿ ತಾವು ಹೈಸ್ಕೂಲ್ ಓದುವಾಗ ತೆಗೆದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶರ್ಟ್, ಬೆಲ್ ಬಾಟಮ್ ಪ್ಯಾಂಟ್ ಧರಿಸಿ ಉದ್ದ ಕೂದಲು ಬಿಟ್ಟು ಸ್ನೇಹಿತರೊಂದಿಗೆ ಇರುವ ಫೋಟೋ ಅದು. ಈ ಫೋಟೋ ಜೊತೆ 'ಶಾಲೆಯಲ್ಲಿ ಓದುವಾಗ ತೆಗೆದ ಪೋಟೋ ಇದು. ನೀವು ನನ್ನ ಅಪ್ಪ-ಅಮ್ಮನನ್ನು ಬೈಯ್ಯಬೇಡಿ. ಆ ಬಟ್ಟೆಯನ್ನು ನಾನೇ ಆರಿಸಿ ಧರಿಸಿಕೊಂಡೆ' ಎಂದು ಹೇಳಿದ್ದಾರೆ. ಇದಕ್ಕೆ ನೆಟಿಜನ್ಗಳು ವಿಧವಿಧವಾಗಿ ಕಮೆಂಟ್ ಮಾಡಿದ್ದಾರೆ. 'ನಿಮ್ಮ ಅಭಿರುಚಿಯೇ ಅಂಥಾದ್ದು ಅದಕ್ಕೆ ನೀವು ಚಿತ್ರರಂಗಕ್ಕೆ ಬಂದಿದ್ದೀರಿ' ಎಂದು ಒಬ್ಬರು ಕಮೆಂಟ್ ಮಾಡಿದರೆ, ಕೆಲವರು ಆರ್ಜಿವಿ ಹೇರ್ಸ್ಟೈಲ್ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಈ ತಿಂಗಳ 18 ರಂದು ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್' ಸಿನಿಮಾ ಬಿಡುಗಡೆಯಾಗುತ್ತಿದ್ದು ತಮ್ಮ ಸ್ನೇಹಿತ ಪೂರಿ ಜಗನ್ನಾಥ್ಗೆ ರಾಮ್ಗೋಪಾಲ್ ವರ್ಮಾ ಚಿತ್ರ ಸಕ್ಸಸ್ ಆಗಲೆಂದು ಶುಭ ಕೋರಿದ್ದಾರೆ.