ಕರ್ನಾಟಕ

karnataka

ETV Bharat / sitara

ಹುಡುಗರಿಗೆ ನಾನು ಅಂದರೆ ಭಯ...ಸ್ವೀಟಿ ಈ ಮಾತು ಹೇಳಿದ್ದೇಕೆ...?

ಕಾಲೇಜಿನಲ್ಲಿ ಓದುವಾಗ ಒಬ್ಬ ಹುಡುಗ ನನಗೆ ಪ್ರಪೋಸ್ ಮಾಡಿದ್ದರು. ನಿನಗೆ ನನ್ನನ್ನು ಲವ್ ಮಾಡಲು ಅಷ್ಟು ಧೈರ್ಯ ಇದ್ದರೆ ನನ್ನ ತಂದೆ ಬಳಿ ಹೋಗಿ ಮದುವೆ ವಿಷಯ ಮಾತನಾಡು ಎಂದು ಹೇಳಿದ್ದೆ. ಅಷ್ಟಕ್ಕೆ ಆ ಹುಡುಗ ಹೆದರಿ ಓಡಿ ಹೊಗಿದ್ದ ' ಎಂದು ಅನುಷ್ಕಾ ನಗುತ್ತಾ ಹೇಳಿಕೊಂಡಿದ್ದಾರೆ.

Anushka shetty
ಅನುಷ್ಕಾ ಶೆಟ್ಟಿ

By

Published : Mar 16, 2020, 2:27 PM IST

ಸ್ವೀಟಿ ಶೆಟ್ಟಿ ಅಲಿಯಾಸ್ ಅನುಷ್ಕಾ ಶೆಟ್ಟಿ, ಕನ್ನಡದ ಹುಡುಗಿಯಾದರೂ ಹೆಸರು ಮಾಡಿರುವುದು ಮಾತ್ರ ತೆಲುಗು ಚಿತ್ರರಂಗದಲ್ಲಿ. 2005 ರಲ್ಲಿ ಬಿಡುಗಡೆಯಾದ ಪೂರಿ ಜಗನ್ನಾಥ್ ನಿರ್ದೇಶನದ 'ಸೂಪರ್' ಚಿತ್ರದ ಮೂಲಕ ಟಾಲಿವುಡ್​​​​ಗೆ ಕಾಲಿಟ್ಟ ಅನುಷ್ಕಾ ಇತ್ತೀಚೆಗಷ್ಟೇ ಟಾಲಿವುಡ್​​​​ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ.

'ನಿಶ್ಯಬ್ಧಂ'

ತನ್ನ ಆ್ಯಕ್ಟಿಂಗ್​​​ನಿಂದ , ಲುಕ್​​​​​ನಿಂದ ಹುಡುಗರ ಮನಸ್ಸು ಕದ್ದಿರುವ ಸ್ವೀಟಿ, ಹುಡುಗರಿಗೆ ನಾನೆಂದರೆ ಭಯ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಿನ ಇಂಟರ್​​​ವ್ಯೂನಲ್ಲಿ ಅನುಷ್ಕಾ ಈ ರೀತಿ ಹೇಳಿಕೊಂಡಿದ್ದಾರೆ. ನಿಮ್ಮನ್ನು ಯಾರಾದರೂ ಹುಡುಗರು ಪ್ರೀತಿಸಿದ್ದಾರಾ, ನಿಮಗೆ ಯಾರಾದರೂ ಪ್ರಪೋಸ್ ಮಾಡಿದ್ದಾರಾ ಎಂಬ ಪ್ರಶ್ನೆಗೆ ಅನುಷ್ಕಾ ' ನಾನು 5.9 ಎತ್ತರ ಇದ್ದೇನೆ, ಇದರೊಂದಿಗೆ ನಾನು ಯಾವಾಗಲೂ ಸೀರಿಯಸ್ ಆಗಿ ಇರುತ್ತಿದ್ದೆ. ಈ ಕಾರಣಕ್ಕೆ ಯಾವ ಹುಡುಗರೂ ನನ್ನ ಹಿಂದೆ ಬೀಳುತ್ತಿರಲಿಲ್ಲ. ಹುಡುಗರು ನಾನು ಎಂದರೆ ಭಯ ಪಡುತ್ತಿದ್ದರು. ಆದರೆ ಕಾಲೇಜಿನಲ್ಲಿ ಓದುವಾಗ ಒಬ್ಬ ಹುಡುಗ ನನಗೆ ಪ್ರಪೋಸ್ ಮಾಡಿದ್ದರು. ನಿನಗೆ ನನ್ನನ್ನು ಲವ್ ಮಾಡಲು ಅಷ್ಟು ಧೈರ್ಯ ಇದ್ದರೆ ನನ್ನ ತಂದೆ ಬಳಿ ಹೋಗಿ ಮದುವೆ ವಿಷಯ ಮಾತನಾಡು ಎಂದು ಹೇಳಿದ್ದೆ. ಅಷ್ಟಕ್ಕೆ ಆ ಹುಡುಗ ಹೆದರಿ ಓಡಿ ಹೊಗಿದ್ದ ' ಎಂದು ನಗುತ್ತಾ ಹೇಳಿಕೊಂಡಿದ್ದಾರೆ. ಅಂದಹಾಗೆ ಅನುಷ್ಕಾ ನಟನೆಯ ಬಹುನಿರೀಕ್ಷಿತ 'ನಿಶ್ಯಬ್ಧಂ' ಚಿತ್ರ ಏಪ್ರಿಲ್ 2 ರಂದು ಬಿಡುಗಡೆಯಾಗುತ್ತಿದೆ.

For All Latest Updates

TAGGED:

ABOUT THE AUTHOR

...view details