ಕರ್ನಾಟಕ

karnataka

ETV Bharat / sitara

Viral alert : ಸಾಲಾರ್ ಸೆಟ್​ನಿಂದ ಪ್ರಭಾಸ್ ಫೊಟೋಗಳು ವೈರಲ್! - ಸಾಲಾರ್ ಚಿತ್ರೀಕರಣ

ಸಾಲಾರ್ ತಂಡವು ಚಿತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಮುಚ್ಚಿಡಲು ತೀವ್ರವಾಗಿ ಪ್ರಯತ್ನಿಸುತ್ತಿದ್ದರೂ, ಚಿತ್ರೀಕರಣದ ವಿಡಿಯೋ ಮತ್ತು ಪ್ರಭಾಸ್​ನ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗುತ್ತಿವೆ..

Prabhas'
Prabhas'

By

Published : Aug 11, 2021, 7:08 PM IST

Updated : Aug 11, 2021, 8:03 PM IST

ಹೈದರಾಬಾದ್ :ಬಾಹುಬಲಿ ಖ್ಯಾತಿಯ ಪ್ರಭಾಸ್ ನಿರ್ಮಾಣದ ವಿವಿಧ ಹಂತಗಳಲ್ಲಿ ಅನೇಕ ಚಿತ್ರಗಳನ್ನು ಹೊಂದಿದ್ದು, ಅವರ ಮುಂಬರುವ ಚಿತ್ರಗಳಲ್ಲಿ ಸಾಲಾರ್ ಹೆಚ್ಚು ಚರ್ಚೆಯಾಗುತ್ತಿದೆ.

ಸಾಲಾರ್ ತಂಡವು ಚಿತ್ರಕ್ಕೆ ಸಂಬಂಧಿಸಿದ ವಿವರಗಳನ್ನು ಮುಚ್ಚಿಡಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಚಿತ್ರೀಕರಣದ ವಿಡಿಯೋ ಮತ್ತು ಪ್ರಭಾಸ್​ನ ಕೆಲ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿವೆ.

ಪ್ರಭಾಸ್​ನ ವೈರಲ್ ಚಿತ್ರಗಳು ಮತ್ತು ವಿಡಿಯೋ ಟ್ವಿಟರ್‌ನಲ್ಲಿ #Salaar ಅಗ್ರ ಟ್ರೆಂಡ್‌ಗಳಲ್ಲಿ ಸ್ಥಾನ ಪಡೆದಿದೆ. ಕಿರು ವೈರಲ್ ವಿಡಿಯೋ ಕ್ಲಿಪ್​ನಲ್ಲಿ ಪ್ರಭಾಸ್ ಕಂದು ಬಣ್ಣದ ಟೀಶರ್ಟ್ ಮತ್ತು ರಿಪ್ಪಡ್ ಜೀನ್ಸ್ ಧರಿಸಿದ್ದಾರೆ.

ಈ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಕೂಡ ನಟಿಸುತ್ತಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಿದೆ. ಪ್ರಶಾಂತ್ ನೀಲ್ ಚಿತ್ರ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ.

ಪ್ರಭಾಸ್ಸದ್ಯಕ್ಕೆ ಪೂಜಾ ಹೆಗ್ಡೆ ಜೊತೆ ರಾಧೆ ಶ್ಯಾಮ್ ಮತ್ತು ಓಂ ರೌತ್ ಅವರ ಆದಿಪುರುಷ್ ಚಿತ್ರಗಳು ಕೈಯಲ್ಲಿವೆ. ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗಿನ ಇನ್ನೊಂದು ಚಿತ್ರ ಕಳೆದ ತಿಂಗಳ ಕೊನೆಯಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಆರಂಭಿಸಿದೆ.

Last Updated : Aug 11, 2021, 8:03 PM IST

ABOUT THE AUTHOR

...view details