ಕರ್ನಾಟಕ

karnataka

ETV Bharat / sitara

'ವೇಷ' ಹಾಕುವವರಿಗೆ ಸಾಥ್​ ನೀಡಿದ 'ಮರಿ ಟೈಗರ್​​​' - ವಿನೋದ್​ ಪ್ರಭಾಕರ್​ ಸುದ್ದಿ

ಗೂಳಿಹಟ್ಟಿ ಚಿತ್ರಗಳ ಖ್ಯಾತಿಯ ನಿರ್ದೇಶಕ ಪವನ್ ಕೃಷ್ಣ 'ವೇಷ' ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ವಿನೋದ್​​ ಪ್ರಭಾಕರ್​​​ ಸಾಥ್​ ನೀಡಿದ್ದಾರೆ..

'ವೇಷ' ಹಾಕುವವರಿಗೆ ಸಾಥ್​ ನೀಡಿದ 'ಮರಿ ಟೈಗರ್​​​'
'ವೇಷ' ಹಾಕುವವರಿಗೆ ಸಾಥ್​ ನೀಡಿದ 'ಮರಿ ಟೈಗರ್​​​'

By

Published : Jan 19, 2021, 9:41 PM IST

ಉಡುಂಬಾ, ಗೂಳಿಹಟ್ಟಿ ಚಿತ್ರಗಳ ಖ್ಯಾತಿಯ ನಿರ್ದೇಶಕ ಪವನ್ ಕೃಷ್ಣ 'ವೇಷ' ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ವಿನೋದ್​​ ಪ್ರಭಾಕರ್​​​ ಸಾಥ್​ ನೀಡಿದ್ದಾರೆ.

ವೇಷ ಮುಹೂರ್ತ ಕಾರ್ಯಕ್ರಮ

ಈ ಸಿನಿಮಾದಲ್ಲಿ ಯುವ ನಟ‌ ರಘು ನಾಯಕನಾಗಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ಗವಿಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಮಾಹಾಕಾಳಿ ದೇವಸ್ಥಾನದಲ್ಲಿ ವೇಷ ಸಿನಿಮಾದ ಮುಹೂರ್ತ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಅತಿಥಿಯಾಗಿ ಆಗಮಿಸಿ, ಈ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಯಿಸಿದ್ದಾರೆ.

'ವೇಷ' ಹಾಕುವವರಿಗೆ ಸಾಥ್​ ನೀಡಿದ 'ಮರಿ ಟೈಗರ್​​​'

ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳನ್ನು ಸೇರಿಸಿಕೊಂಡೇ ವೇಷ ಚಿತ್ರ ಮೂಡಿಬರಲಿದೆ. ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು ವೇಷ ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ ಅಂತಾರೆ ನಿರ್ದೇಶಕ ಪವನ್ ಕೃಷ್ಣ.

ವೇಷ ಚಿತ್ರತಂಡ

ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟಿ ವಾಣಿಶ್ರೀ ಈ ಚಿತ್ರದಲ್ಲಿ ತಾಯಿ ಪಾತ್ರ ಮಾಡುತ್ತಿದ್ದಾರೆ‌. ಇನ್ನು ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕನಾಗಿಯೂ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಇದೇ ತಿಂಗಳ 27ರಿಂದ ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ವೇಷ ಚಿತ್ರತಂಡ

ABOUT THE AUTHOR

...view details