ಟಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಇದೀಗ ಬಿಗ್ ಸ್ಟಾರ್. ದೇಶದ ನಾನಾ ಭಾಗಗಳಲ್ಲಿ ಈ ನಟನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಸಿನಿಮಾದಿಂದ ಈ ನಟನ ನಸೀಬು ಬದಲಾಯ್ತು.
ಇದೀಗ ತೆಲುಗು ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಒಂದು ವಿಶೇಷ ಸುದ್ದಿ ಸಿಕ್ಕಿದೆ. ಅದೇನಂದ್ರೆ ದೇವರಕೊಂಡ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆಯ ಗೃಹ ಪ್ರವೇಶ ಮಾಡಿ ಮನೆ ಹೊಕ್ಕಿರುವ ದೇವರಕೊಂಡ, ತನ್ನ ಫ್ಯಾಮಿಲಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.