ಸಂತೋಷ್ ಬಿ. (ಸಂತು) ಅವರ 27 ನಿಮಿಷಗಳ 'ವಿಧಾತ್ರು' ಕಿರುಚಿತ್ರ, ಹೈದರಾಬಾದ್‍ನಲ್ಲಿ ನಡೆದ ಸೈಮಾ ಕಿರುಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಸಂತೋಷ್ ಅವರಿಗೆ ಹಾಗೂ ಅತ್ಯುತ್ತಮ ಪೋಷಕ ಪ್ರಧಾನ ಪಾತ್ರಕ್ಕಾಗಿ ನಾಗೇಂದ್ರ ಶಾ ಅವರಿಗೆ ಪ್ರಶಸ್ತಿ ಸಂದಿದೆ.
ಎರಡು ಸೈಮಾ ಪ್ರಶಸ್ತಿ ಬಾಚಿಕೊಂಡ ವಿಧಾತ್ರು ಕಿರುಚಿತ್ರ - ಪೆನ್ಸಿಲ್ ಕಟ್ ಬ್ಯಾನರ್ ಲಾಂಛನ
ಯುವ ಪ್ರತಿಭೆಗಳ ಅನಾವರಣಕ್ಕೆ ಕಿರುಚಿತ್ರಗಳು ಉತ್ತಮ ವೇದಿಕೆಯಾಗುತ್ತಿವೆ. ಸದ್ಯ ಕನ್ನಡದ ವಿಧಾತ್ರು ಕಿರುಚಿತ್ರ ಎರಡು ಸೈಮಾ ಅವಾರ್ಡ್ ಬಾಚಿಕೊಂಡಿದೆ.
ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶನ, ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ಹಾಸ್ಯನಟ, ಮಹಿಳಾ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ, ಪುರುಷ ಪ್ರಧಾನ ಪಾತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ಸೇರಿದಂತೆ ಆರು ವಿಭಾಗಗಳಲ್ಲಿ ವಿಧಾತ್ರು ಸರ್ಧಿಸಿತ್ತು. ಅದರಲ್ಲಿ 2 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಅಪ್ಪ-ಮಗನ ಸಂಬಂಧದ ಬಗೆಗಿನ ಕಥಾ ಹಂದರ ಇರುವ ಈ ಕಿರುಚಿತ್ರವನ್ನು ಪೆನ್ಸಿಲ್ ಕಟ್ ಬ್ಯಾನರ್ ಲಾಂಛನದಲ್ಲಿ ನವೀನ್ ಎಸ್.ಪಿ. ಹಾಗೂ ಆಶಾ ಹೆಚ್.ಎಸ್. ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ಆಶ್ಲೇ ಮೆಂಡೋಸಾ ಹಿನ್ನೆಲೆ ಸಂಗೀತ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ ಹಾಗೂ ಪ್ರಕಾಶ್ ಕಾರಿಂಜಾ ಅವರ ಸಂಕಲನ ಈ ಚಿತ್ರಕ್ಕಿದೆ. ವಿವೇಕ್ ಸಿಂಹ, ತೇಜಸ್ವಿನಿ ಶೇಖರ್, ನಾಗೇಂದ್ರ ಶಾ, ಪದ್ಮಕಲಾ, ನಿಸರ್ಗ, ಗಿರೀಶ್, ವಿನೋದ್ ಜ್ಯೋತಿನಗರ್, ಪುರುಷೋತ್ತಮ್, ರಾಘವೇಂದ್ರ, ಸುನಿಲ್ ಕುಲಕರ್ಣಿ ಮುಂತಾದವರು ಈ ಕಿರುಚಿತ್ರದ ತಾರಾಬಳಗದಲ್ಲಿದ್ದಾರೆ.