ಉತ್ತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಪ್ರವಾಹ ಉಂಟಾಗಿ ಜನರು ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಜೊತೆಗೆ ರಾಜ್ಯದ ನಾನಾ ಭಾಗಗಳಿಂದ ನೆರೆ ಸಂತ್ರಸ್ತರಿಗಾಗಿ ನೆರವಿನ ಹೊಳೆಯೇ ಹರಿದು ಬರುತ್ತಿದೆ.
ನೆರೆಗೆ ಸಿಕ್ಕ ಜಾನುವಾರುಗಳಿಗಾಗಿ ಮೇವು ಕಳುಹಿಸಿಕೊಟ್ಟ ನಟಿ ಲೀಲಾವತಿ - Veteran Actress Leelavati
ಉತ್ತರ ಕರ್ನಾಟಕದ ನೆರೆ ಪೀಡಿತ ರೈತರ ಜಾನುವಾರುಗಳಿಗೆ ಹಿರಿಯ ನಟಿ ಲೀಲಾವತಿ ಒಂದು ಟ್ರಕ್ ಮೂಲಕ ಮೇವು ಕಳಿಸಿಕೊಟ್ಟಿದ್ದಾರೆ. ಪ್ರವಾಹಪೀಡಿತ ಜನರಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಆದರೆ ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ರೈತರು ಮನವಿ ಮಾಡಿದ್ದರು.
ಇನ್ನು ಪ್ರವಾಹಕ್ಕೆ ನಲುಗಿರುವ ಪ್ರದೇಶದ ದನ-ಕರುಗಳಿಗೆ ಮೇವು ಕಳಿಸುವ ಮೂಲಕ ಸ್ಯಾಂಡಲ್ವುಡ್ ಹಿರಿಯ ನಟಿ ಲೀಲಾವತಿ ಮಾನವೀಯತೆ ಮೆರೆದಿದ್ದಾರೆ.
ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಜಾನುವಾರುಗಳಿಗೆ ಲಾರಿ ಮೂಲಕ ಮೇವು ಕಳಿಸಿದ್ದಾರೆ. ಬೆಂಗಳೂರಿನ ಹೊರವಲಯದ ಸೂಲದೇವನ ಹಳ್ಳಿಯ ಬಳಿಯಿರುವ ಲೀಲಾವತಿ ಅವರ ಫಾರ್ಮ್ ಹೌಸ್ನಿಂದ ಮೇವು ತುಂಬಿದ ವಾಹನ ಉತ್ತರ ಕರ್ನಾಟಕದತ್ತ ಹೊರಟಿದೆ. ಪ್ರವಾಹದ ತೀವ್ರತೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ರೈತರು ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ಅಂಗಲಾಚಿದ್ದರು. ರೈತರ ಮನವಿಗೆ ಸ್ಪಂದಿಸಿರುವ ನಟಿ ಲೀಲಾವತಿ ಜಾನುವಾರುಗಳಿಗೆ ಒಂದು ಟ್ರಕ್ನಲ್ಲಿ. ಮೇವು ಕಳಿಸಿಕೊಟ್ಟಿದ್ದಾರೆ.