ಬೆಂಗಳೂರು: ಸ್ಯಾಂಡಲ್ವುಡ್ ಹ್ಯಾಂಡ್ಸಮ್ ವಿಲನ್ ವಸಿಷ್ಠ ಎನ್ ಸಿಂಹಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅದರೆ ಕೊರೊನಾ ಹಿನ್ನೆಲೆ ತಮ್ಮ ಅಭಿಮಾನಿಗಳು ಎಲ್ಲಿದ್ದಿರೋ ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ವಸಿಷ್ಠ ಮನವಿ ಮಾಡಿದ್ದಾರೆ.
ವಸಿಷ್ಠ ಸಿಂಹಗೆ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ - villain Vasishta Simha
ಈ ವರ್ಷ ಕೊರೊನಾ ಹಿನ್ನೆಲೆ ಹಲವು ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಈಗ ವಸಿಷ್ಠ ಸಹ ಜನುಮ ದಿನ ಆಚರಿಸದಿರಲು ನಿರ್ಧರಿಸಿದ್ದಾರೆ. ನಾವೆಲ್ಲ ಸೇರಿ ಕೊರೊನಾವನ್ನು ಹೊಡೆದೋಡಿಸೋಣ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ತಮ್ಮ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ವಸಿಷ್ಠಗೆ ಚಿತ್ರರಂಗದ ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರಿದ್ದಾರೆ. ರಾಜಾ ಹುಲಿ, ಗೋದಿ ಬಣ್ಣ ಸಾಧರಣ ಮೈಕಟ್ಟು, ದಯವಿಟ್ಟು ಗಮನಿಸಿ, ಮಾಯಾಬಜಾರ್, ಟಗರು, ಮಫ್ತಿ, ಕವಚ, ಕೆಜಿಎಫ್ ಸಿನಿಮಾಗಳು ಸಾಕಷ್ಟು ಯಶಸ್ಸು ತಂದುಕೊಂಡಿವೆ. ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯ ವರ್ಸಸ್ ಇಂಗ್ಲೆಂಡ್’ ಸಿನಿಮಾ ಮೂಲಕ ನಾಯಕನ ಪಟ್ಟ ಸಹ ಪಡೆದಿದ್ದರು.
ತೆಲುಗಿನ ಸಹ ‘ಒಡೆಲ ರೈಲ್ವೆ ಸ್ಟೇಷನ್ ಹಾಗೂ ಕನ್ನಡದ ತಲ್ವಾರ್ ಪೇಟೆ’ ರಿಲೀಸ್ ರೆಡಿಯಾಗಿವೆ. ಪ್ರೊಡಕ್ಷನ್ ನಂ 1 ಹರಿಪ್ರಿಯಾ ಜತೆ ಒಪ್ಪಿಕೊಂಡಿರುವ ಸಿನಿಮಾಕ್ಕೆ ‘ಮರ್ಯಾದಸ್ಥ’ ಅಂತ ಶೀರ್ಷಿಕೆ ಇಡಲು ಪ್ಲಾನ್ ಮಾಡಲಾಗಿದೆ. ಮೊನ್ನೆಯಷ್ಟೇ ‘ಎವರು’ ತೆಲುಗು ರಿಮೇಕ್ ಚಿತ್ರ ಒಪ್ಪಿಕೊಂಡಿದ್ದಾರೆ.