ಕರ್ನಾಟಕ

karnataka

ETV Bharat / sitara

ಸಂಜನಾ ಬಾರ್​ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​: ಕ್ಯಾಸಿನೋದಲ್ಲಿ ಸಂಜನಾ ಜೊತೆ ವಂದನಾ ಇದ್ದ ಫೋಟೊ ಔಟ್​ - ಸಂಜನಾ ಗಲ್ರಾನಿ

ಕಳೆದ ವರ್ಷ ಡಿಸೆಂಬರ್​​​ನಲ್ಲಿ ನಡೆದಿದ್ದ ಚಿತ್ರ ನಟಿ ಸಂಜನಾ ಗಲ್ರಾನಿ ಹಾಗೂ ವಂದನಾ ಜೈನ್ ಜಗಳ ಕ್ಯಾಸಿನೋ ಹಾಗೂ ಡ್ರಗ್ಸ್ ವಿಚಾರಕ್ಕೆ ಆಗಿದ್ದು ಎಂದು ಸುಳಿವು ಸಿಕ್ಕಿದೆ.

Twist to the Sanjana-Vandana case
ಸಂಜನಾ-ವಂದಾನ ಪ್ರಕರಣಕ್ಕೆ ಟ್ವಿಸ್ಟ್​​

By

Published : Sep 15, 2020, 8:13 PM IST

ಬೆಂಗಳೂರು:ಕಳೆದ ವರ್ಷ ಡಿಸೆಂಬರ್​​​ನಲ್ಲಿ ನಡೆದಿದ್ದ ಚಿತ್ರ ನಟಿ ಸಂಜನಾ ಗಲ್ರಾನಿ ಹಾಗೂ ವಂದನಾ ಜೈನ್ ಜಗಳ ಕ್ಯಾಸಿನೋ ಹಾಗೂ ಡ್ರಗ್ಸ್ ವಿಚಾರಕ್ಕೆ ಆಗಿದ್ದು ಎಂದು ಸುಳಿವು ಸಿಕ್ಕಿದೆ.

ವಂದಾನ

ಮೂಲಗಳ ಪ್ರಕಾರ ಚಂದನವನದ ಗಾಂಜಾ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ವಿಚಾರದ ಸುಳಿವು ಸಿಕ್ಕಿದ್ದು, ಕ್ಯಾಸಿನೋದಲ್ಲಿ ಸಂಜನಾ ಹಾಗೂ ವಂದನಾ ಜೈನ್ ಜೊತೆಗಿರುವ ಚಿತ್ರ ಲಭ್ಯವಾಗಿದೆ.

ಬಲಿಸ್ ಕ್ಯಾಸಿನೋದಲ್ಲಿ ವಂದನಾ ಜೈನ್ ಹಾಗೂ ಈಗ ಸಿಸಿಬಿ ಗ್ರಿಲ್ ಮಾಡುತ್ತಿರುವ ಗಂಡ ಹೆಂಡತಿ ಚಿತ್ರ ಖ್ಯಾತಿಯ ಸಂಜನಾ ಜೊತೆಗೆ ಪೋಸ್ ನೀಡಿದ್ದರು. ಅಲ್ಲದೆ ವಂದನಾ ಜೈನ್, ಗಾಂಜಾ ಪ್ರಕರಣದ ಎ 5 ಆರೋಪಿ ವೈಭವ್ ಜೈನ್ ಹಾಗೂ ರಾಹುಲ್ ತೋನ್ಸೆ ಜೊತೆ ಕೂಡ ಕಾಣಿಸಿಕೊಂಡಿದ್ದರು.

ದಿಗಂತ್-ಐಂದ್ರಿತಾ ರೈ ದಂಪತಿಗಳ ಜೊತೆಗೂ ಫೋಟೋ :

ಮೂಲಗಳು ಹೇಳುವ ಪ್ರಕಾರ ವಂದನಾ ಜೈನ್ ಪ್ರಭಾವಿ ವ್ಯಕ್ತಿಯಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಇಂದು ಸಿಸಿಬಿ ದಿಗಂತ್ ಐಂದ್ರಿತಾಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ. ಆದರೆ ವಂದನಾ ಜೈನ್, ರಾಹುಲ್ ತೋನ್ಸೆ , ವೈಭವ್ ಜೈನ್ ಹಾಗೂ ದಿಗಂತ್ ದಂಪತಿಗಳೊಂದಿಗೆ ಕಾಣಿಸಿಕೊಂಡಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ.

ದಿಗಂತ್​, ಐಂದ್ರಿತಾ, ವಂದನಾ

ವಂದಿತಾ ಜೈನ್​​ಗೆ ರಾಜಕೀಯ ನಂಟು :

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಯಾಗಿದ್ದ ವಜ್ರೋದ್ಯಮಿ ಡಾ ನೋವೆರಾ ಶೇಖ್ ಗೆ ವಂದನಾ ಜೈನ್ ಪ್ರಚಾರಕ್ಕೆ ಕೈ ಜೋಡಿಸಿದ್ದರು. ಇನ್ನು ನಿರ್ಮಾಪಕಿ ಎಂದು ಕರೆಸಿಕೊಳ್ಳುವ ವಂದನಾ ಜೈನ್ 2015ರಲ್ಲಿ ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಈಕೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕೂಡ ಇತ್ತು ನಂತರ ಆ ದೂರು ಹಿಂಪಡೆಯಲಾಗಿತ್ತು.

ದಿಗಂತ್​, ಐಂದ್ರಿತಾ, ವಂದನಾ

ಒಟ್ಟಾರೆ ದಿನಕ್ಕೊಂದು ಹೊಸ ಹೆಸರು ಬಯಲಿಗೆ ಬರುತ್ತಿದೆ, ಡ್ರಗ್ಸ್ ಜಾಲ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಬೆಳೆದಿದೆ. ಇದಕ್ಕೆ ಪೊಲೀಸರು ಹಾಗೂ ಸರ್ಕಾರ ಮಾದಕ ವಸ್ತುಗಳನ್ನ ನಿಗ್ರಹ ಮಾಡುವುದರಲ್ಲಿ ಯಶಸ್ವಿ ಆಗುತ್ತಾರ ಎಂದು ನೋಡಬೇಕಿದೆ.

ವಂದನಾ

ABOUT THE AUTHOR

...view details