ಕರ್ನಾಟಕ

karnataka

ETV Bharat / sitara

ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ: ಮಕ್ಕಳಿಗೆ ಪಾಠ ಮಾಡಿದ್ರು ಬಿಗ್​ಬಾಸ್ ಭುವನ್ - bigboss

ಈ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ ಆಚರಿಸಿ, ಗಿಡಕ್ಕೆ ಆರತಿ ಎತ್ತಿ- ಪೂಜಿಸುವ ವಿಶಿಷ್ಟ ಆಚರಣೆ ಕಳೆದ 5 ವರ್ಷಗಳಿಂದ ಜಾರಿಯಲ್ಲಿದೆ. ಈ ಬಾರಿ ಗಿಡದ ಹುಟ್ಟುಹಬ್ಬದ ಆಚರಣೆಯಲ್ಲಿ ಬಿಗ್​ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಪಾಲ್ಗೊಂಡು ಮಕ್ಕಳೊಂದಿಗೆ ಸಂಭ್ರಮಿಸಿದರು.

ಸರ್ಕಾರಿ ಶಾಲೆಯಲ್ಲಿ ನಡೆಯಿತು ಗಿಡಗಳ ಹುಟ್ಟುಹಬ್ಬ

By

Published : Aug 1, 2019, 6:36 AM IST

ಚಾಮರಾಜನಗರ:ಮಕ್ಕಳು, ತಂದೆ-ತಾಯಿ ಹಾಗೂ ಮಿತ್ರರು ಜನ್ಮದಿನ ಆಚರಿಸುವುದನ್ನು ನೋಡಿದ್ದೀರಿ. ಆದರೆ, ಈ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬವನ್ನು ಬಿಗ್​ಬಾಸ್ ಖ್ಯಾತಿಯ ಭುವನ್ ಜೊತೆಗೆ ವಿದ್ಯಾರ್ಥಿಗಳು ಆಚರಿಸಿದರು.

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ ಆಚರಿಸಿ, ಗಿಡಕ್ಕೆ ಆರತಿ ಎತ್ತಿ- ಪೂಜಿಸುವ ವಿಶಿಷ್ಟ ಆಚರಣೆ ಕಳೆದ 5 ವರ್ಷಗಳಿಂದ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಬಿಗ್​ಬಾಸ್ ಭುವನ್ ಪೊನ್ನಣ್ಣ ತಮ್ಮ ಹೆಸರಿನಲ್ಲೊಂದು ಸಸಿ ನೆಟ್ಟು ನೀರೆರೆದರು.‌

ತಮ್ಮ ಶಾಲಾ ದಿನಗಳ ತುಂಟಾಟ, ನಾಯಕತ್ವ ಗುಣ ಬೆಳೆಸಿಕೊಳ್ಳುವ ಕುರಿತು‌ ಇದೇ ವೇಳೆ ಭುವನ್​ ಪಾಠ ಮಾಡಿದ್ರು.‌‌ ಬಳಿಕ ಚಿಣ್ಣರೊಂದಿಗೆ ಕಬಡ್ಡಿ, ವಾಲಿಬಾಲ್‌ ಆಡಿ ಸಂಭ್ರಮಿಸಿದರು.

ಒಟ್ಟಿನಲ್ಲಿ, ಮನುಷ್ಯರ ರೀತಿಯೇ ಗಿಡಗಳಿಗೂ ಪ್ರಾಶಸ್ತ್ಯ ನೀಡಿ ಹುಟ್ಟುಹಬ್ಬ ಆಚರಿಸಿದ್ದು ಒಂದು ವಿಶೇಷವೇ ಸರಿ.

ABOUT THE AUTHOR

...view details