ಖ್ಯಾತ ಹಾಲಿವುಡ್ ಗಾಯಕ ಟಾಮ್ ಪಾರ್ಕರ್ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. "ನಾನು ಟ್ಯೂಮರ್ ಚಿಕಿತ್ಸೆಯತ್ತ ಹೆಚ್ಚು ಗಮನ ನೀಡುತ್ತಿರುವುದರಿಂದ ನನ್ನ ಮಗುವಿನೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಟಾಮ್ ಪಾರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅ ಸಮಸ್ಯೆಯಿಂದ ಮಗುವಿನೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ...ಟಾಮ್ ಪಾರ್ಕರ್
ವಾಂಟೆಡ್ ಗಾಯಕ ಟಾಮ್ ಪಾರ್ಕರ್ ಕಳೆದ ಕೆಲವು ದಿನಗಳಿಂದ ಬ್ರೈನ್ ಟ್ಯೂಮರ್ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದ ಮಗುವಿನೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಷ್ಟೇ ಟಾಮ್ ಪಾರ್ಕರ್ ಹಾಗೂ ಪತ್ನಿ ಕೆಲ್ಸಿ ಹಾರ್ಡ್ವಿಕ್ ಗಂಡುಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಬೋಧಿ ಥಾಮಸ್ ಪ್ಯಾರಿಸ್ ಪಾರ್ಕರ್ ಎಂದು ಹೆಸರಿಟ್ಟಿದ್ದಾರೆ. ಮಗು ಜನಿಸಿದಾಗಿನಿಂದ ಅವನ ಕಡೆ ಗಮನ ನೀಡಲು ಸಾಧ್ಯವಾಗದಿರುವುದು ನನಗೆ ಬಹಳ ಬೇಸರ ಉಂಟುಮಾಡಿದೆ. ಆದರೆ ಇದು ಕೆಲವೇ ದಿನಗಳು ಮಾತ್ರ. ಚಿಕಿತ್ಸೆ ಮುಗಿದ ನಂತರ ನಾನು ಅವನೊಂದಿಗೆ ಸಮಯ ಕಳೆಯಬಹುದು. ಆ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಟಾಮ್ ಪಾರ್ಕರ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಮ್ ಪತ್ನಿ ಕೆಲ್ಸಿ, ಟಾಮ್ ಮನೆಯಲ್ಲೇ ಇರುತ್ತಾರೆ. ಆದರೆ ಮಗುವಿಗಿಂತ ಹೆಚ್ಚಾಗಿ ಈಗ ಅವರು ಟ್ಯೂಮರ್ ಚಿಕಿತ್ಸೆಗೆ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ದಂಪತಿಗೆ 1 ವರ್ಷದ ಮಗಳು ಕೂಡಾ ಇದ್ಧಾಳೆ. ಪಾರ್ಕರ್ ಗ್ಲಿಯೊಬ್ಲಾಸ್ಟೋಮಾ ಎಂಬ ಟ್ಯೂಮರ್ನಿಂದ ಬಳಲುತ್ತಾರೆ. ಇದು ಬಹಳ ಅಪಾಯಕಾರಿಯಾಗಿದ್ದು ಈ ಸಮಸ್ಯೆಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.