ಕರ್ನಾಟಕ

karnataka

ETV Bharat / sitara

ಡ್ರಗ್​ ಮಾಫಿಯಾ ಪ್ರಕರಣ: ಸ್ಟಾರ್​​ ನಟಿಯ ಸ್ನೇಹಿತರು ವಶಕ್ಕೆ, ಇಜಿಲಾಗೆ ನೋಟಿಸ್​​​ - ಕನ್ನಡ ಸಿನಿಮಾ

ಡ್ರಗ್​​ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್​​ಗಳನ್ನ ಸಿಸಿಬಿ ನಾರ್ಕೊಟಿಕ್ ಟೀಮ್​ ವಿಚಾರಣೆಗೆ ಒಳಪಡಿಸಿದೆ. ಇದರಲ್ಲಿ ಸ್ಟಾರ್​ ನಟಿಯೊಬ್ಬರ ಸ್ನೇಹಿತರೂ ಇರುವುದು ಕುತೂಹಲ ಕೆರಳಿಸಿದೆ.

The Drug Mafia Case, CCB, who captured the star actress's friends
ಡ್ರಗ್​ ಮಾಫಿಯಾ ಪ್ರಕರಣ : ಸ್ಟಾರ್​​ ನಟಿ ಸ್ನೇಹಿತರನ್ನು ವಶಕ್ಕೆ ಪಡೆದ ಸಿಸಿಬಿ : ಇಜಿಲಾಗೆ ನೊಟೀಸ್​​

By

Published : Sep 2, 2020, 8:34 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್​​ಗಳನ್ನ ಸಿಸಿಬಿ ನಾರ್ಕೊಟಿಕ್ ಟೀಮ್​ ವಿಚಾರಣೆಗೆ ಒಳಪಡಿಸಿದೆ.

ವಶಕ್ಕೆ ಪಡೆದಿರುವರ ಪೈಕಿ ಸ್ಟಾರ್ ನಟಿಯ ಸ್ನೇಹಿತನಾಗಿದ್ದು ಸದ್ಯ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ಸಿಸಿಬಿ ಜಂಟಿ‌ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದ್ದಾರೆ.

ನಟಿಯ ಸ್ನೇಹಿತ ಕೆಲ ವಿಚಾರಗಳನ್ನು ಬಾಯಿಬಿಟ್ಟ ಮೇರೆಗೆ ಸ್ಟಾರ್ ನಟಿಯೊಬ್ಬರಿಗೆ ಸಿಸಿಬಿ ಬುಲಾವ್ ನೀಡುವ ಸಾಧ್ಯತೆ ಇದೆ. ಅಲ್ಲದೆ ನಾಳೆ ಸ್ಯಾಂಡಲ್​​ವುಡ್ ನಟಿಯನ್ನ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​ ನೀಡುವ ಸಾಧ್ಯತೆಗಳಿವೆ.

ಮತ್ತೊಂದೆಡೆ ನಿರ್ಮಾಪಕ ಇಂದ್ರಜಿತ್ ಅವರಿಗೆ ಕೂಡ ನೋಟಿಸ್​ ನೀಡಲಾಗಿದ್ದು, ನಾಳೆ ಸಿಸಿಬಿಯಲ್ಲಿ‌ ಮಹತ್ತರ ಘಟನೆ ನಡೆಯಲಿದೆ.

ABOUT THE AUTHOR

...view details