ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಬಹುನಿರೀಕ್ಷಿತ ಭಾರತ್ ಸಿನಿಮಾ ವಿಶ್ವದಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಆದರೆ, ಈ ನಡುವೆ ಪೈರಸಿ ಹಾವಳಿ ಮುಂದುವರೆದಿದ್ದು, ಪೂರ್ಣ ಸಿನಿಮಾ ಸೋರಿಕೆಯಾಗಿದೆ. ಇದರಿಂದ ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ ಸಲ್ಲು ಚಿತ್ರ ಡಲ್ ಹೊಡೆದಿದೆಯಂತೆ. ನಿನ್ನೆ ನಡೆದ ಇಂಡಿಯಾ ಮತ್ತು ಸೌಥ್ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯ ಕೂಡ ಭಾರತ್ ಚಿತ್ರದ ಮೇಲೆ ಪರಿಣಾಮ ಬೀರಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿನ್ನಡೆಯಾಗಿದೆ. ಸಿನಿ ರಸಿಕರಿಂದ ಒಳ್ಳೆಯ ವಿಮರ್ಶೆ ಪಡೆದರು ಕೂಡ ಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದಿದೆ.