ಕರ್ನಾಟಕ

karnataka

ETV Bharat / sitara

'ಶುಗರ್ Factory' ಟೀಸರ್ ಔಟ್ : Attitude​​​ ಎಲ್ಲಾ ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ​

ಸ್ಯಾಂಡಲ್​ವುಡ್​ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಶುಗರ್​ ಫ್ಯಾಕ್ಟರಿಯ ಟೀಸರ್​ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಟೀಸರ್​​ನಲ್ಲಿ ಕೃಷ್ಣನ ಅಟಿಟ್ಯೂಡ್ ಕಾಣಬಹುದಾಗಿದೆ.

Sugar Factory Cinema
ಶುಗರ್ ಫ್ಯಾಕ್ಟರಿ ಸಿನಿಮಾ

By

Published : Jun 12, 2021, 2:50 PM IST

'ಶುಗರ್ ಫ್ಯಾಕ್ಟರಿ' ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. ಕೃಷ್ಣನ ಬರ್ತ್​ಡೇಗೆ ನಿರ್ದೇಶಕ ದೀಪಕ್ ಅರಸ್ ವಿಭಿನ್ನವಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಹೀರೋ ಕ್ಯಾರೆಕ್ಟರ್​ನ ಪೋಟ್ರೆ ಮಾಡುವಂತ ಆಟಿಟ್ಯೂಡ್ ಟೀಸರ್ ಇದಾಗಿದ್ದು, ಅಟಿಟ್ಯೂಡೇ ಎಲ್ಲಾ (Attitude is Everything ) ಅಂತಿದ್ದಾರೆ ಕೃಷ್ಣ.

ಕಲರ್ ಫುಲ್ ಲೈಟ್ಸ್‌ನಲ್ಲಿ ಮ್ಯಾಜಿಕ್ ಮಾಡುವ ಕೃಷ್ಣನ ಆ್ಯಟಿಟ್ಯೂಡ್ ಅನ್ನು ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಮಾಡಿದ್ದಾರೆ. ಕೃಷ್ಣನಿಗೆ, ಸೋನಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ, ಮೂವರು ಮಂಗಳೂರಿನ ಬೆಡಗಿಯರು ಜೋಡಿಯಾಗಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಆರ್. ಗಿರೀಶ್ 'ಶುಗರ್ ಫ್ಯಾಕ್ಟರಿ' ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಕಬೀರ್ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನ ಶುಗರ್ ಫ್ಯಾಕ್ಟರಿ ಸಿನಿಮಾಗೆ ಇರಲಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಡೌಟೇ ಇಲ್ಲ ಎನ್ನಲಾಗ್ತಿದೆ.

ಬೆಂಗಳೂರು ಹಾಗೂ ಗೋವಾದಲ್ಲಿ ಶೇ. 70 ರಷ್ಟು ಚಿತ್ರೀಕರಣ ನಡೆಸಿರುವ ಶುಗರ್ ಫ್ಯಾಕ್ಟರಿ ತಂಡ, ಅನ್ ಲಾಕ್ ಆಗಿ ಶೂಟಿಂಗ್‌ಗೆ ಅವಕಾಶ ಕೊಡುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ವಿದೇಶದಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಲು ನಿರ್ದೇಶಕ ತಯಾರಿ ನಡೆಸಿದ್ದಾರೆ.

ಓದಿ : ಡಾರ್ಲಿಂಗ್ ಕೃಷ್ಣ ಬರ್ತ್ ​ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್!

ABOUT THE AUTHOR

...view details