ಕರ್ನಾಟಕ

karnataka

ETV Bharat / sitara

‘ಗಂಡಸು ಅಂತಾ ತೋರಿಸಲು ಕತ್ತಲಾಗಬೇಕಿಲ್ಲ' .. ಕಿಚ್ಚ ಸುದೀಪ್ ಟ್ವೀಟ್ - ಕನ್ನಡ ಚಿತ್ರ ರಂಗದಲ್ಲಿ ಚರ್ಚೆ

ಯಾವಾಗಲೂ ಸಮಯಕ್ಕೆ ಸರಿಯಾದ ಮಾತನ್ನು ಆಡುತ್ತ ಎಲ್ಲರ ಮನಗೆಲ್ಲುವ ಕಿಚ್ಚ ಸುದೀಪ್, ಇದೀಗ ಜನ ಜೀವನಕ್ಕೆ ಬಹಳ ಹೊಂದಿಕೊಳ್ಳುವಂತೆ ತಾವು ಓದಿದ ಒಂದು ಕೋಟೇಶನ್‌ನ ಟ್ವೀಟ್ ಮಾಡಿರೋದು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

‘ಗಂಡಸು ಅಂತಾ ತೋರಿಸಲು ಕತ್ತಲಾಗಬೇಕಿಲ್ಲ' ; ಸುದೀಪ್ ಟ್ವೀಟ್

By

Published : Aug 13, 2019, 8:17 AM IST

ಬೆಂಗಳೂರು:ಸರಿಯಾದ ಸಮಯಕ್ಕೆ ಸರಿಯಾದ ಮಾತು ಆಡುವುದರಲ್ಲಿ ಕಿಚ್ಚ ಸುದೀಪ್ ನಿಸ್ಸೀಮರು. ಈಗಿರುವ ಚಿತ್ರ ರಂಗದ ಪರಿಸ್ಥಿತಿ, ಸ್ಟಾರ್ ವಾರ್, ಅತ್ತ ಕಡೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಜನ ಜೀವನಕ್ಕೆ ಬಹಳ ಹೊಂದಿಕೊಳ್ಳುವಂತೆ ಕಿಚ್ಚ ಸುದೀಪ್ ತಾವು ಓದಿದ ಒಂದು ಕೋಟೇಶನ್‌ನ ಟ್ವೀಟ್‌ ಮಾಡಿದ್ದಾರೆ.

ಏನದು ಕೋಟೇಶನ್?
‘ಗಂಡಸುತನ ತೋರಿಸಲು ಕತ್ತಲಾಗಬೇಕಿಲ್ಲ, ಯೋಗ್ಯತೆ ಇದ್ದವರ ಜೊತೆ ನನ್ನ ಫೈಟ್’ ಎಂಬ ಮಾತು ಹಲವಾರು ಅರ್ಥಗಳನ್ನು ಕೊಡುತ್ತದೆ. ಈಗಾಗಲೇ ಕಿಚ್ಚ ಸುದೀಪ್‌ರ ಈ ಮಾತಿನಿಂದ ಅಭಿಮಾನಿಗಳು ಏನೇನೋ ಅರ್ಥಗಳನ್ನು ಕಲ್ಪಿಸಿಕೊಳ್ಳಲು ಶುರು ಮಾಡಿದ್ದಾರೆ.

ಸುದೀಪ್ ಓದಿದ ವಿಚಾರವನ್ನು ಹೀಗೆ ಟ್ವೀಟ್ ಮಾಡಿದಕ್ಕೆ ಕನ್ನಡ ಚಿತ್ರ ರಂಗದಲ್ಲಿ ಚರ್ಚೆಗೊಳಗಾಗಲು ಶುರುವಾಗಿದೆ. ಅವರು ಮದ್ಯಪಾನ ಮಾಡಿ ಗಂಡಸು ಅಂತಾ ಪ್ರೂವ್ ಮಾಡಬೇಕಿಲ್ಲ ಎಂದು ಯಾರಿಗೆ ಹೇಳಿದರು ಎಂಬುದು ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಹಾಗೆ ಕತ್ತಲಾಗಲಿ ಎಂದು ಕಾಯುವುದು ಇಲ್ಲ ಎಂಬುದು ಹಾಗೂ ಕತ್ತಲಾದ ಮೇಲೆ ಮದ್ಯಪಾನ ಮಾಡಿ ಜರಗುವ ಘಟನೆಗಳಿಗೆ ಕಿಚ್ಚ ಕಿಕ್ ನೀಡುವಂತಿದೆ.

ಯಾರಿಗೂ ನೇರವಾಗಿ ಹೇಳದೆಯೇ, ಎಲ್ಲರಿಗೆ ಇದು ಅನ್ವಯ ಆಗುವಂತೆ ಬುದ್ದಿವಂತಿಕೆಯಿಂದ ಹೇಳುವ ಮಾತುಗಳಿವು. ಅರ್ಥ ಆದವರಿಗೆ ಅರ್ಥ ಆಗಿರುತ್ತದೆ ಎಂಬುದು ಮಾಧ್ಯಮದ ವಲಯದಲ್ಲಿ ಚರ್ಚೆ ಆಗುತ್ತಿದೆ. ಚಿತ್ರರಂಗದಲ್ಲಿ ನಂಬರ್ ಗೇಮ್ ಸ್ಟಾರ್ ವಿಚಾರಕ್ಕೂ ಕಿಚ್ಚ ಸುದೀಪ್ ಅವರ ಟ್ವೀಟ್ ಮಾತು, ನನ್ನೊಂದಿಗೆ ಫೈಟ್ ಮಾಡುವವರು ಯೋಗ್ಯತೆ ಇಟ್ಟುಕೊಂಡಿರಬೇಕು ಎಂಬುದನ್ನೂ ಯಾಕೆ ಹೇಳಿದರು ಎಂದು ಎಣಿಕೆ ಮಾಡುತ್ತಿದೆ ಅಭಿಮಾನಿಗಳ ಸಂಘ.

ABOUT THE AUTHOR

...view details