ಮುಂಬೈ: ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತೆ ಖಾಕಿ ತೊಟ್ಟಿದ್ದಾರೆ. ರೌಡಿ ರಾಥೋಡ್ ಆಗಿ ಘರ್ಜಿಸಿದ್ದ ಅಬ್ಬರಕ್ಕೆ ಬಾಕ್ಸಾಫೀಸ್ ಗಲ್ಲಾಪೆಟ್ಟಿಯಲ್ಲಿ ಧೂಳೆದ್ದಿತ್ತು. ಈಗ ರೋಹಿತ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರದಲ್ಲಿ ರಫ್ ಅಂಡ್ ಟಫ್ ಅಕ್ಷಯ್ ಸೂರ್ಯವಂಶಿ ಆಗಿದ್ದಾರೆ.
ಬಿಟೌನ್ ನಿರ್ದೇಶಕ ರೋಹಿತ್ ಶೆಟ್ಟಿಗೂ ಮತ್ತು ಪೊಲೀಸ್ ಕಥೆ ಆಧರಿಸಿದ ಸಿನಿಮಾಗಳಿಗೂ ಅವಿನಾಭಾವ ಸಂಬಂಧ ಅನ್ನಿಸುತ್ತೆ. ಸಿಂಗಂ, ಸಿಂಬಾದಂತಾ ಯಶಸ್ವಿ ಚಿತ್ರಗಳನ್ನ ಕೊಟ್ಟ ರೋಹಿತ್ ಶೆಟ್ಟಿ ಈಗ ಮತ್ತೆ ಟಫ್ ಕಾಪ್ ಕುರಿತಂತೆ ಮತ್ತೊಂದು ಸಿನಿಮಾಗೆ ಸ್ಟಾರ್ಟ್-ಕಟ್ ಹೇಳುತ್ತಿದ್ದಾರೆ. ಅಕ್ಷಯ್‌ಕುಮಾರ್‌ಗೆ ಮತ್ತೆ ಖಾಕಿ ಹಾಕಿಸಿರುವ ರೋಹಿತ್‌ಶೆಟ್ಟಿ, ತಮ್ಮ ಚಿತ್ರಕ್ಕೆ 'ಸೂರ್ಯವಂಶಿ' ಅಂತ ಹೆಸರಿಟ್ಟಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಸೂರ್ಯವಂಶಿ, ಪೊಲೀಸ್ ಕಥೆಯಾಧರಿಸಿದ ನಾಲ್ಕನೇ ಸಿನಿಮಾ.
2020ರ ಈದ್‌ಗೆ ಚಿತ್ರ ರಿಲೀಸಾಗಲಿದೆಯಂತೆ. bullet for a bullet ಅನ್ನೋದು ಚಿತ್ರದ ಟ್ಯಾಗ್‌ಲೈನ್. ಬುಲೆಟ್‌ನ ಬುಲೆಟ್‌ನಿಂದಲೇ ಎದುರಿಸಬೇಕು ಅನ್ನೋದು ಚಿತ್ರದ ತಿರುಳಂತೆ.
'ರೋಹಿತ್ ಶೆಟ್ಟಿ ಚಿತ್ರದಲ್ಲಿ ಅಕ್ಷಯ್‌ಕುಮಾರ್ ಎಲ್ಲ ಕಾಲಕ್ಕೂ ಕಿಲಾಡಿ' ಅಂತ ನಿರ್ಮಾಪಕ ಕರಣ್ ಜೋಹರ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಫಸ್ಟ್ ಲುಕ್ ಸಮೇತ ಬರೆದುಕೊಂಡು ಶೇರ್ ಮಾಡಿದ್ದಾರೆ. ಬ್ಲಾಕ್‌ಬಸ್ಟರ್ ಮೆಷಿನ್ ರೋಹಿತ್ ಶೆಟ್ಟಿ, ಅಕ್ಷಯ್‌ಕುಮಾರ್‌ಗೆ ನಿರ್ದೇಶನ ಮಾಡುತ್ತಿದ್ದಾರೆ ಅಂತ ಕರಣ್ ಹೊಗಳಿದ್ದಾರೆ.
ಪೊಲೀಸ್ ಕಥೆಯಾಧರಿಸಿ ತೆಗೆದಿದ್ದ ಸಿಂಗಂ ಮತ್ತು ಸಿಂಬಾ ಯಶಸ್ವಿಯಾಗಿವೆ. ಆ ಬಳಿಕ ರೋಹಿತ್ ಶೆಟ್ಟಿ ಸೂರ್ಯವಂಶಿ ನಿರ್ದೇಶನ ಮಾಡುತ್ತಿದ್ದು, ಇದೇ ಚಿತ್ರದ ಪೊಲೀಸ್ ಅಧಿಕಾರಿಯ ಡ್ರೆಸ್‌ನಲ್ಲಿ ಅಕ್ಷಯ್ ತುಂಬಾ ಖದರಾಗಿ ಕಾಣಿಸಿಕೊಂಡಿದ್ದಾರೆ. ಇದೂ ಕೂಡ ಪೊಲೀಸ್ ಕಥೆಯಾಧರಿಸಿದೆ ಅಂತ ಬೇರೆ ಹೇಳಬೇಕಿಲ್ಲ. ಇದರಲ್ಲಿ ಅಕ್ಷಯ್‌ಗೆ ವೀರ ಸೂರ್ಯವಂಶಿ ಹೆಸರಿನ ಪಾತ್ರವಿದೆ. ಆತ ಉಗ್ರ ನಿಗ್ರಹ ಪಡೆ ಮುಖ್ಯಸ್ಥ ಅಂತ ಚಿತ್ರ ತಂಡ ಹೇಳುತ್ತಿದೆ.
ಇದು ರೋಹಿತ್ ಶೆಟ್ಟಿ ಪೊಲೀಸ್ ಜಗತ್ತು. ಸಿಡಿದೇಳುವ ಸೂರ್ಯವಂಶಿ ನೋಡಲು ರೆಡಿಯಾಗಿರಿ ಅಂತ ಅಕ್ಷಯ್‌ಕುಮಾರ್ ತಮ್ಮ ಟ್ವಿಟರ್‌ನಲ್ಲಿ ಚಿತ್ರದ ಪೋಸ್ಟರ್ ಸಮೇತ್ ಬರೆದುಕೊಂಡಿದ್ದಾರೆ. ಕರಣ್ ಜೋಹರ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.