2016 ರಲ್ಲಿ ತೆರೆ ಕಂಡ ಬಾಲಿವುಡ್ ಸಿನಿಮಾ 'ಪಿಂಕ್' ಅದ್ಭುತ ವಿಜಯ ಸಾಧಿಸಿತ್ತು. 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ 70 ಕೋಟಿ ರೂಪಾಯಿ ಲಾಭ ಮಾಡಿತ್ತು.
ತಮಿಳಿನಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್, ತೆಲುಗು 'ಪಿಂಕ್' ರಿಮೇಕ್ನಲ್ಲಿ ಯಾರು? - undefined
ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಪಿಂಕ್' ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದ್ದು ತಾಪ್ಸಿ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್, ಅಮಿತಾಬ್ ಪಾತ್ರದಲ್ಲಿ ಅಜಿತ್ ನಟಿಸುತ್ತಿದ್ದಾರೆ. ತೆಲುಗಿನಲ್ಲೂ ಸಿನಿಮಾ ರಿಮೇಕ್ ಆಗಲಿದ್ದು ಅಮಿತಾಬ್ ಪಾತ್ರದಲ್ಲಿ ಬಾಲಯ್ಯ ನಟಿಸಬಹುದು ಎನ್ನಲಾಗುತ್ತಿದೆ.
ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದ್ದು ಈಗಾಗಲೇ ಚಿತ್ರೀಕರಣ ಮುಗಿದಿದೆ. 'ನೇರ್ಕೊಂಡ ಪರ್ವೈ' ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದ್ದು ಅಜಿತ್ ಜೊತೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಹಾಗೂ ಇನ್ನಿತರರು ನಟಿಸಿದ್ದಾರೆ. ಹಿಂದಿಯಲ್ಲಿ ತಾಪ್ಸಿ ಪನ್ನು ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಶ್ರದ್ಧಾ ಶ್ರೀನಾಥ್ ಮಾಡುತ್ತಿದ್ದಾರೆ. ಸಿನಿಮಾ ಟೀಸರ್ ಕೂಡಾ ಬಿಡುಗಡೆಯಾಗಿದ್ದು ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಹೆಚ್.ವಿನೋದ್ ಈ ಸಿನಿಮಾವನ್ನು ನಿರ್ದೇಶಿಸಿದ್ದು ಬೋನಿ ಕಪೂರ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಈ ಸಿನಿಮಾ ಇದೀಗ ತೆಲುಗಿಗೆ ರೀಮೇಕ್ ಆಗಲಿದೆ ಎನ್ನಲಾಗುತ್ತಿದೆ. ನಿರ್ಮಾಪಕ ದಿಲ್ ರಾಜು ಈ ಸಿನಿಮಾದ ರೀಮೇಕ್ ರೈಟ್ಸ್ ಪಡೆದಿದ್ದಾರಂತೆ. ಹಿಂದಿಯಲ್ಲಿ ಅಮಿತಾಬ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಬಾಲಕೃಷ್ಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ತಾಪ್ಸಿ ಪನ್ನು ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಕೂಡಾ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಆದ್ರೂ ಬಾಲಯ್ಯ ಹಾಗೂ ದಿಲ್ರಾಜು ಕಾಂಬಿನೇಶನ್ನಲ್ಲಿ ಒಂದು ಸಿನಿಮಾ ತಯಾರಾಗಲಿದ್ದು ಅದು ಇದೇ ಸಿನಿಮಾ ಇರಬಹುದಾ ಎಂಬ ಅನುಮಾನ ಟಾಲಿವುಡ್ ಮಂದಿಗೆ ಕಾಡುತ್ತಿದೆ.