'ಯೂಟರ್ನ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದ ಶ್ರದ್ಧಾ ಶ್ರೀನಾಥ್, ಇದೀಗ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷಾ ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಶ್ರದ್ಧಾ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ಶ್ರದ್ಧಾ ಅಭಿನಯದ ಹೊಸ ತಮಿಳು ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
ಶ್ರದ್ಧಾ ಶ್ರೀನಾಥ್ ಅಭಿನಯದ 'ಚಕ್ರ' ಸಿನಿಮಾ ಕನ್ನಡ ಟ್ರೇಲರ್ ರಿಲೀಸ್ - Tamil actor Vishal
ಶ್ರದ್ಧಾ ಶ್ರೀನಾಥ್, ವಿಶಾಲ್, ರೆಜಿನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಚಕ್ರ' ಸಿನಿಮಾ ಟ್ರೇಲರ್ ತಮಿಳಿನೊಂದಿಗೆ ಕನ್ನಡ, ತೆಲುಗಿನಲ್ಲೂ ಬಿಡುಗಡೆಯಾಗಿದ್ದು ಸಿನಿಮಾ ದೀಪಾವಳಿ ವೇಳೆಗೆ ಜೀ 5 ಡಿಜಿಟಲ್ ಪ್ಲಾಟ್ಫ್ಲಾರ್ಮ್ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ವಿಶಾಲ್ ಜೊತೆ ಶ್ರದ್ಧಾ ಅಭಿನಯಿರುವ 'ಚಕ್ರ' ಚಿತ್ರದ ಟ್ರೇಲರ್ ತಮಿಳು, ತೆಲುಗು, ಕನ್ನಡದಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ರೆಜಿನಾ ಕ್ಯಾಸಂದ್ರ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ. ದೀಪಾವಳಿ ವೇಳೆಗೆ ಜೀ 5 ಒಟಿಟಿ ಪ್ಲಾಟ್ಫ್ಲಾರ್ಮ್ ಮೂಲಕ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರವನ್ನು ಎಂ.ಎಸ್. ಆನಂದನ್ ನಿರ್ದೇಶಿಸಿದ್ದಾರೆ. ವಿಶಾಲ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ವಿಶಾಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ಯಾಂಕ್ ದರೋಡೆ, ಸೈಬರ್ ಕ್ರೈಂ, ಸೈಬರ್ ಹ್ಯಾಕಿಂಗ್ ಅಂಶವನ್ನೊಂದಿರುವ ಚಿತ್ರ ಪ್ರೇಕ್ಷಕರನ್ನು ಯಾವ ರೀತಿ ರಂಜಿಸಲಿದೆ ಕಾದು ನೋಡಬೇಕು. ಚಿತ್ರದ ಹಾಡುಗಳಿಗೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಶ್ರುತಿ ಡಾಂಗೇ, ರೋಬೋ ಶಂಕರ್, ಮನೋಬಾಲ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.