ಮುಂಬೈ: ಹಿಂದಿ ಟಿವಿ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ನಟಿಯರಲ್ಲಿ ಶ್ರದ್ಧಾ ಆರ್ಯ ಕೂಡ ಒಬ್ಬರು. 'ಕುಂಡಲಿ ಭಾಗ್ಯ'ಧಾರಾವಾಹಿ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುವ ಶ್ರದ್ಧಾ, ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ 'ಕುಂಡಲಿ ಭಾಗ್ಯ' ಸೆಟ್ಗೆ ಮರಳಿದ ಶ್ರದ್ಧಾ ಆರ್ಯ - ಕೊರೊನಾದಿಂದ ಶ್ರದ್ಧಾ ಆರ್ಯ ಗುಣಮುಖ
ಕಳೆದ ಕೆಲವು ದಿನಗಳ ಹಿಂದೆ 'ಕುಂಡಲಿ ಭಾಗ್ಯ'ಧಾರಾವಾಹಿಯ ನಟಿ ಶ್ರದ್ಧಾ ಆರ್ಯಗೆ ಕೋವಿಡ್‌ಗೆ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆ ಶೂಟಿಂಗ್ನಿಂದ ಅಂತರ ಕಾಯ್ದುಕೊಂಡು ಮನೆಯಲ್ಲಿ ಚೇತರಿಸಿಕೊಂಡ ನಟಿ, ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಕೊರೊನಾದಿಂದ ಗುಣಮುಖರಾದ ಶ್ರದ್ಧಾ ಆರ್ಯ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ, ಆಗಾಗ ತಮ್ಮ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಶ್ರದ್ಧಾ ಆರ್ಯಗೆ ಕೋವಿಡ್‌ಗೆ ಪಾಸಿಟಿವ್ ದೃಢಪಟ್ಟಿತ್ತು.
ಈ ಹಿನ್ನೆಲೆ ಶೂಟಿಂಗ್ನಿಂದ ಅಂತರ ಕಾಯ್ದುಕೊಂಡು ಮನೆಯಲ್ಲಿ ಚೇತರಿಸಿಕೊಂಡ ನಟಿ, ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು, 'ಕುಂಡಲಿ ಭಾಗ್ಯ' ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.