ಸ್ಯಾಂಡಲ್ವುಡ್ ಸುಪ್ರೀಂ ಹೀರೋ ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಕ್ಷಿತ್ ನಟಿಸುತ್ತಿರುವ ಚೊಚ್ಚಲ ಸಿನಿಮಾ 'ಸೀತಾಯಣ'ದ ಟೀಸರ್ ಇಂದು ಬಿಡುಗಡೆಯಾಗಿದೆ.
ಸೀತಾಯಣ ಚಿತ್ರದ ಟೀಸರ್ ಮೂರು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಸೀತಾಯಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇನ್ನು ಕನ್ನಡ ಟೀಸರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ರೆ, ತೆಲುಗಿನ ಟೀಸರ್ ಅನ್ನು ತೆಲುಗು ಮಾಸ್ ಮಹಾರಾಜ ರವಿ ತೇಜಾ ರಿಲೀಸ್ ಮಾಡಿದ್ದಾರೆ.