ಕರ್ನಾಟಕ

karnataka

By

Published : Feb 7, 2020, 5:51 PM IST

ETV Bharat / sitara

ಶಿವರಾತ್ರಿ ಹಬ್ಬಕ್ಕೆ 'ರಣಗಿರಿ ರಹಸ್ಯ' ಭೇದಿಸಲು ಬರಲಿದ್ದಾರೆ ರಮೇಶ್ ಅರವಿಂದ್

ಸೈಕಾಲಜಿಕಲ್ ಥ್ರಿಲ್ಲರ್ ಕಥೆ ಆಧರಿಸಿರುವ 'ಶಿವಾಜಿ ಸುರತ್ಕಲ್' ಟ್ರೇಲರ್ ಸಾಕಷ್ಟು ಭರವಸೆ ಹುಟ್ಟಿಸಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಎರಡು ಶೇಡ್​​​​​​​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೈಲೆಟ್​​​​​​​​​​​​​​​​​​​​​​​​​​ ಬಗ್ಗೆ ಮಾಹಿತಿ ನೀಡಲು, ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ 'ಶಿವಾಜಿ ಸುರತ್ಕಲ್' ಚಿತ್ರತಂಡ ಉಪಸ್ಥಿತಿ ಇತ್ತು.

Shivaji Surathkal
'ಶಿವಾಜಿ ಸುರತ್ಕಲ್'

'ಶಿವಾಜಿ ಸುರತ್ಕಲ್' , ಟೈಟಲ್​​​​ನಿಂದಲೇ ಸ್ಯಾಂಡಲ್​​ವುಡ್​​ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಕನ್ನಡದ ಚಾರ್ಮಿಂಗ್ ಸ್ಟಾರ್ ರಮೇಶ್‌ ಅರವಿಂದ್‌ ಅಭಿನಯದ 101ನೇ ಸಿನಿಮಾ 'ಶಿವಾಜಿ ಸುರತ್ಕಲ್'. ಟೀಸರ್​​​​​​​​​​​​​​​​​​​​​​​​​​​ನಿಂದ ಗಮನ ಸೆಳೆದಿದ್ದ ಶಿವಾಜಿ ಸುರತ್ಕಲ್ ಚಿತ್ರದ ಅಫಿಷಿಯಲ್ ಟ್ರೇಲರ್ ಅನಾವರಣಗೊಂಡಿದೆ.

'ಶಿವಾಜಿ ಸುರತ್ಕಲ್' ಸುದ್ದಿಗೋಷ್ಠಿ

ಸೈಕಾಲಜಿಕಲ್ ಥ್ರಿಲ್ಲರ್ ಕಥೆ ಆಧರಿಸಿರುವ 'ಶಿವಾಜಿ ಸುರತ್ಕಲ್' ಟ್ರೇಲರ್ ಸಾಕಷ್ಟು ಭರವಸೆ ಹುಟ್ಟಿಸಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಎರಡು ಶೇಡ್​​​​​​​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೈಲೆಟ್​​​​​​​​​​​​​​​​​​​​​​​​​​ ಬಗ್ಗೆ ಮಾಹಿತಿ ನೀಡಲು, ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ 'ಶಿವಾಜಿ ಸುರತ್ಕಲ್' ಚಿತ್ರತಂಡ ಉಪಸ್ಥಿತಿ ಇತ್ತು. ಆಕಾಶ್ ಶ್ರೀವತ್ಸ ಈ ಚಿತ್ರವನ್ನು ನಿರ್ದೇಶಿಸಿದರೆ, ಅನೂಪ್ ಗೌಡ ಹಾಗೂ ರೇಖಾ ಕೆ.ಎನ್​. ನಿರ್ಮಿಸಿದ್ದಾರೆ.

'ಶಿವಾಜಿ ಸುರತ್ಕಲ್'

'ರಂಗಿತರಂಗ' ಚಿತ್ರದ ನಾಯಕಿ ರಾಧಿಕಾ ನಾರಾಯಣ್ ರಮೇಶ್ ಪತ್ನಿ ಜನನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ದೃಶ್ಯಂ' ಚಿತ್ರದಲ್ಲಿ ನಟಿಸಿದ್ದ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಕೇಸ್‌ ಆಫ್ ರಣಗಿರಿ ರಹಸ್ಯ' ಎಂಬ ಟ್ಯಾಗ್​​​​​​​​​​​​​​​​​​​​​​​​ಲೈನ್ ಹೊಂದಿರುವ ಈ ಚಿತ್ರ, ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ ವಿಭಿನ್ನವಾದ ಸಿನಿಮಾ ಆಗುವ ಸೂಚನೆ ನೀಡಿದೆ. ಈ ಚಿತ್ರಕ್ಕೆ ಗುರು ಪ್ರಸಾದ್ ಎಂ.ಜಿ. ಕ್ಯಾಮರಾ ವರ್ಕ್ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

ಮಹಾಶಿವರಾತ್ರಿ ಹಬ್ಬಕ್ಕೆ ಶಿವಾಜಿ ಸುರತ್ಕಲ್ ಸಿನಿಮಾವನ್ನು, ಕೆ.ಆರ್​​​​.ಜಿ ಸ್ಟುಡಿಯೋ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆ ಮಾಡಲಿದೆ. ಶ್ರೀಕಾಂತ್‌ ಈ ಚಿತ್ರವನ್ನು ಸಂಕಲನ ಮಾಡಿದ್ದಾರೆ. ಅಭಿಜಿತ್‌, ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಮಹಾ ಶಿವರಾತ್ರಿ ಹಬ್ಬಕ್ಕೆ , ಅಂದರೆ ಫೆಬ್ರವರಿ 21 ರಂದು ರಮೇಶ್‌ ಅರವಿಂದ್‌ ಡಿಟೆಕ್ಟಿವ್‌ ‌ಆಗಿ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ.

For All Latest Updates

TAGGED:

ABOUT THE AUTHOR

...view details