ಕರ್ನಾಟಕ

karnataka

By

Published : Sep 10, 2021, 7:24 PM IST

ETV Bharat / sitara

ಶಿವಾಜಿ ಸುರತ್ಕಲ್-2 ಪೋಸ್ಟರ್ ಬಿಡುಗಡೆ.. ಡಿಟೆಕ್ಟರ್​ ಆಗಿ ಕಥೆ ಹೇಳಲಿದ್ದಾರೆ ರಮೇಶ್ ಅರವಿಂದ್..

ನಿರ್ಮಾಪಕರಾದ ರೇಖಾ ಕೆ ಎನ್ ಹಾಗೂ ಅನುಪ್ ಶಿವಾಜಿ ಸುರತ್ಕಲ್ ಪಾರ್ಟ್-2 ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ‌. ಸಂಪೂರ್ಣ ಕಥೆ-ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್​ನಲ್ಲಿ ಶೂಟಿಂಗ್ ಶುರು ಮಾಡುವ ಯೋಚನೆಯಲ್ಲಿದೆ..

Shivaji Surathkal 2 poster release
ಶಿವಾಜಿ ಸುರತ್ಕಲ್-2 ಪೋಸ್ಟರ್ ಬಿಡುಗಡೆ

ಸ್ಯಾಂಡಲ್​ವುಡ್​ನಲ್ಲಿ 2020ರಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮನಗೆದ್ದ ಸಿನಿಮಾ‌ ಶಿವಾಜಿ ಸುರತ್ಕಲ್. ರಮೇಶ್ ಅರವಿಂದ್ ಡಿಟೆಕ್ವೀವ್ ಪಾತ್ರದಲ್ಲಿ ಕಾಣಿಸಿದ್ದ ಶಿವಾಜಿ ಸುರತ್ಕಲ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಿ, ವಿತರಕರಿಂದಲೇ ಬ್ಲಾಕ್ ಬಾಸ್ಟರ್ ಎನಿಸಿಕೊಂಡಿತ್ತು. ಈಗ ಶಿವಾಜಿ ಸುರತ್ಕಲ್ ಸಿನಿಮಾ ಪಾರ್ಟ್-2 ಬರುತ್ತಿದೆ.

ನಟ ರಮೇಶ್ ಅರವಿಂದ್

ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶಿವಾಜಿ ಸುರತ್ಕಲ್-2 ಪೋಸ್ಟರ್​ನ ಬಿಡುಗಡೆ ಮಾಡಲಾಗಿದೆ. ಶಿವಾಜಿಯಾಗಿ ರಮೇಶ್ ಅರವಿಂದ್ ಅವರು ಬಣ್ಣ ಹಚ್ಚಲಿದ್ದಾರೆ. ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ತಾರಾಗಣವಿದೆ. ಕೆಲ ಹೊಸಮುಖಗಳನ್ನು ಸಹ ಚಿತ್ರದಲ್ಲಿ ಪರಿಚಯಿಸಲಾಗಿದೆ.

ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳುವ ಹಾಗೆ ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು. ಆದರೆ, ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದೆ. ಪತ್ತೇದಾರಿ ಕಥೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಈ ಕಥೆ ಸಾಗಲಿದೆ.

ಗುರುಪ್ರಸಾದ್ M.G. ಛಾಯಾಗ್ರಾಹಣವಿದ್ದು, ಉಳಿದಂತೆ ತಾಂತ್ರಿಕ ತಂಡವನ್ನು ಸದ್ಯದಲ್ಲೇ ಬಹಿರಂಗಗೊಳಿಸಲಿದೆ ಚಿತ್ರತಂಡ. ಭಾಗ-1ರ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರಿಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ.

ಶಿವಾಜಿ ಸುರತ್ಕಲ್-2 ಪೋಸ್ಟರ್

ನಿರ್ಮಾಪಕರಾದ ರೇಖಾ ಕೆ ಎನ್ ಹಾಗೂ ಅನುಪ್ ಶಿವಾಜಿ ಸುರತ್ಕಲ್ ಪಾರ್ಟ್-2 ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ‌. ಸಂಪೂರ್ಣ ಕಥೆ-ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್​ನಲ್ಲಿ ಶೂಟಿಂಗ್ ಶುರು ಮಾಡುವ ಯೋಚನೆಯಲ್ಲಿದೆ.

ಓದಿ:ಗಣೇಶ ಹಬ್ಬಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಟ್ಟ ಯೋಗಿಯ ಲಂಕೆ ಸಿನಿಮಾ

ABOUT THE AUTHOR

...view details