ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು ನಟಿ ಶುಭಾ ಪೂಂಜಾ. ಸದ್ಯ ಶುಭಾ ಪೂಂಜಾ ಗೆಳೆಯ ಸುಮಂತ್ ಜೊತೆ ತಮ್ಮ ಹುಟ್ಟೂರಿನಲ್ಲಿ ಬಹಳ ಸರಳವಾಗಿ ವಿವಾಹವಾಗಿದ್ದಾರೆ.
ಸಿಂಪಲ್ ಆಗಿ ಗೆಳೆಯನ ಜೊತೆ ಸಪ್ತಪದಿ ತುಳಿದ ಶುಭಾ ಪೂಂಜಾ! - ಸಿಂಪಲ್ ಆಗಿ ಗೆಳಯನ ಜೊತೆ ಸಪ್ತಪದಿ ತುಳಿದ ಶುಭಾ ಪೂಂಜಾ
ಉಡುಪಿಯ ಶಿರ್ವದಲ್ಲಿ ಶುಭಾ ಪೂಂಜಾ ಸುಮಂತ್ ಜೊತೆ ಬಹಳ ಸರಳವಾಗಿ ಹಸಮಣೆ ಏರಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಕಳೆದ ವರ್ಷವೇ ಶುಭಾ ಪೂಂಜಾ ಮದುವೆ ಆಗುವ ಬಗ್ಗೆ ಸುಳಿವು ನೀಡಿದ್ದರು..
ಸುಮಂತ್ ಜೊತೆ ಸಪ್ತಪದಿ ತುಳಿದ ಶುಭಾ ಪೂಂಜಾ
ಉಡುಪಿಯ ಶಿರ್ವಾದಲ್ಲಿ ಶುಭಾ ಪೂಂಜಾ ಅವರು ಸುಮಂತ್ ಜೊತೆ ಬಹಳ ಸರಳವಾಗಿ ಹಸೆಮಣೆ ಏರಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಕಳೆದ ವರ್ಷವೇ ಶುಭಾ ಪೂಂಜಾ ಮದುವೆ ಆಗುವ ಬಗ್ಗೆ ಸುಳಿವು ನೀಡಿದ್ದರು.
ಈಗ ಶುಭಾ ಪೂಂಜಾ ಹುಟ್ಟಿದ ಊರಿನಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಶುಭಾ ಪೂಂಜಾ ಮದುವೆಗೆ ಸಿನಿಮಾ ರಂಗದ ಕೆಲ ಸ್ನೇಹಿತರು ಹಾಗೂ ಎರಡು ಕುಟುಂಬದವರು ಸಾಕ್ಷಿಯಾಗಿದ್ದಾರೆ. ಸುಮಂತ್ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ.
Last Updated : Jan 5, 2022, 3:59 PM IST
TAGGED:
Shubha Poonja married