ಕರ್ನಾಟಕ

karnataka

ETV Bharat / sitara

ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ; ವಿಚ್ಛೇದನದ ಬಳಿಕ ನಟಿ ಸಮಂತಾ ಮೊದಲ ಮಾತು - ವಿಚ್ಛೇದನದ ಬಗ್ಗೆ ನಟಿ ಸಮಂತಾ ಸಂದರ್ಶನ

ಇಷ್ಟು ದಿನಗಳ ಕಾಲ ಮೌನ ವಹಿಸಿದ್ದ ನಟಿ ಸಮಂತಾ ರುತ್ ಪ್ರಭು ಈಗ ಪತಿ ನಾಗಚೈತನ್ಯ ಅವರಿಂದ ಬೇರ್ಪಟ್ಟ ಬಗ್ಗೆ ತುಟಿ ಬಿಚ್ಚಿದ್ದಾರೆ. ವೈಯಕ್ತಿಕ ದುರಂತದಿಂದ ಹೊರ ಬರಬಹುದೆಂದು ತನಗೆ ತಿಳಿದಿರಲಿಲ್ಲ ಎಂದು ನಟಿ ತನ್ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ..

Samantha on separation: Never knew I could pass this, thought I'd crumble and die
Samantha on separation: Never knew I could pass this, thought I'd crumble and die

By

Published : Dec 7, 2021, 7:27 PM IST

Updated : Dec 7, 2021, 7:45 PM IST

ಹೈದರಾಬಾದ್(ತೆಲಂಗಾಣ) :ಟಾಲಿವುಡ್​ ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ಮೌನ ಮುರಿದಿದ್ದಾರೆ.

ವಿವಾಹ ವಿಚ್ಛೇದನದ ಬಗ್ಗೆ ತಾವು ತೆಗೆದುಕೊಂಡ ಕಠಿಣ ನಿರ್ಧಾರದ ಬಗ್ಗೆ ಹಾಗೂ ಇದರಿಂದ ಅನುಭವಿಸಿದ ತೊಳಲಾಟ ಮತ್ತು ನೋವುಗಳ ಬಗ್ಗೆ ನಟಿ ಸಮಂತಾ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗಳಿಗೆ ಬಹಿರಂಗವಾಗಿಯೇ ಎಳೆಎಳೆಯಾಗಿ ಉತ್ತರಿಸಿದ್ದಾರೆ.

ಬಹುಭಾಷಾ ನಟಿ ಸಮಂತಾ ರುತ್ ಪ್ರಭು

ನಾಗಚೈತನ್ಯರಿಂದ ಬೇರೆಯಾದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ. ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ನಾನೂ ಸಹ ಊಹಿಸಿಕೊಂಡಿರಲಿಲ್ಲ. ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ, ನಾನು ಎಷ್ಟು ಬಲಶಾಲಿಯಾಗಿದ್ದೇನೆ ಅನ್ನೋದು ನನಗೆ ಈಗ ಗೊತ್ತಾಗಿದೆ.

ನಟಿ ಸಮಂತಾ

ದುರಂತದಿಂದ ಹೊರ ಬರಬಹುದೆಂದು ತನಗೆ ತಿಳಿದಿರಲಿಲ್ಲ. ಹಾಗಾಗಿ, ನನ್ನ ಬಗ್ಗೆ ನನಗೆ ಈಗ ಹೆಮ್ಮೆ ಅನ್ನಿಸುತ್ತಿದೆ. ಜೀವನದಲ್ಲಿ ಇನ್ನೂ ಬಹಳ ಮುಂದೆ ಸಾಗಬೇಕಿದೆ ಎಂದು ಇದೇ ಮೊದಲ ಬಾರಿಗೆ ತಮ್ಮ ವಿಚ್ಛೇದನದ ನಂತರದ ಬದುಕಿನ ಕುರಿತು ಸಮಂತಾ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.

ನಟಿ ಸಮಂತಾ

ಕಠಿಣ ಪರಿಶ್ರಮ ಹಾಗೂ ತನ್ನ ಉತ್ತಮ ಕೆಲಸದಿಂದ ಟೀಕಾಕಾರರ ಬಾಯಿ ಮುಚ್ಚೇ ಮುಚ್ಚಿಸುತ್ತೇನೆ ಎಂದು ಹಠಕ್ಕೆ ಬಿದ್ದಿರುವ ಸಮಂತಾ, ಸದ್ಯ ಎರಡು ಬಹುಭಾಷಾ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಸ್​ಗೆ ಒಪ್ಪಿಗೆ ನೀಡಿದ್ದಾರಂತೆ. ಅವುಗಳು ಶೀಘ್ರದಲ್ಲೇ ಸೆಟ್ಟೇರಲಿವೆ.

ಇನ್ನು ಸಮಂತಾ ತಮ್ಮ ಹೊಸ ಚಿತ್ರ ಯಶೋದಾ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಚಿತ್ರದ ಪೋಸ್ಟರ್​ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಹರಿ ಮತ್ತು ಹರೀಶ್ ನಿರ್ದೇಶನ ಈ ಚಿತ್ರವನ್ನು ಮಾಡುತ್ತಿದೆ. ತೆಲುಗು, ಮಲಯಾಳಂ, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ.

ಇದನ್ನೂ ಓದಿ: ಮೂರೇ ದಿನದಲ್ಲಿ 20.23 ಕೋಟಿ ರೂ. ಕಲೆಕ್ಷನ್.. ಸಖತ್​ ಸೌಂಡ್​ ಮಾಡ್ತಿದೆ ಮದಗಜ

Last Updated : Dec 7, 2021, 7:45 PM IST

ABOUT THE AUTHOR

...view details