ಕರ್ನಾಟಕ

karnataka

ETV Bharat / sitara

ಅಲ್ಲು ಅರ್ಜುನ್​​ಗೆ ತಂಗಿಯಾಗ್ತಾರಂತೆ ಸಾಯಿ ಪಲ್ಲವಿ..! - ಸಾಯಿ ಪಲ್ಲವಿ

ಅಲ್ಲು ಅರ್ಜುನ್​​ ನಟನೆಯ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಸಾಯಿ ಪಲ್ಲವಿ ಅಲ್ಲು ಅರ್ಜುನ್​ಗೆ ತಂಗಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ಅಲ್ಲು ಅರ್ಜುನ್​​ಗೆ ತಂಗಿಯಾಗ್ತಾರಂತೆ ಸಾಯಿ ಪಲ್ಲವಿ..!
ಅಲ್ಲು ಅರ್ಜುನ್​​ಗೆ ತಂಗಿಯಾಗ್ತಾರಂತೆ ಸಾಯಿ ಪಲ್ಲವಿ..!

By

Published : Jan 16, 2021, 7:42 PM IST

ಬಹುಭಾಷಾ ನಟಿ ಸಾಯಿ ಪಲ್ಲವಿಗೆ ಸದ್ಯ ಆಫರ್​ ಮೇಲೆ ಆಫರ್​​ಗಳು ಬರ್ತಿವೆ. ತೆಲುಗು, ತಮಿಳು, ಮಲಯಾಳಂ ಸಿನಿ ರಂಗಗಳಿಂದ ಸಿಕ್ಕಾಪಟ್ಟೆ ಅವಕಾಶಗಳು ಅರಸಿ ಬರುತ್ತಿವೆ. ಆದ್ರೀಗ ಒಬ್ಬ ಸ್ಟಾರ್​​ ನಟನಿಗೆ ರೌಡಿ ಬೇಬಿ ತಂಗಿಯಾಗಿ ನಟಿಸುತ್ತಿದ್ದಾರಂತೆ.

ಅಲ್ಲು ಅರ್ಜುನ್

ಹೌದು ಕೊರೊನಾ ಕೊಂಚ ಕಡಿಮೆ ಆದ್ಮೇಲೆ ಅಂದ್ರೆ ಡಿಸೆಂಬರ್​ನಿಂದ ಮತ್ತೆ ಶೂಟಿಂಗ್ ಶುರು ಮಾಡಿರುವ ಅಲ್ಲು ಅರ್ಜುನ್​​ ನಟನೆಯ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಸಾಯಿ ಪಲ್ಲವಿ ಅಲ್ಲು ಅರ್ಜುನ್​ಗೆ ತಂಗಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

ಅಲ್ಲು ಅರ್ಜುನ್​​ ಮತ್ತು ರಶ್ಮಿಕಾ

ಚಿತ್ರಕ್ಕೆ ಸುಕುಮಾರ್​ ಆಕ್ಷನ್​ ಕಟ್​ ಹೇಳುತ್ತಿದ್ದು ಈ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಚಿತ್ರವಾಗಿ ಹೊರಹೊಮ್ಮಲಿದೆ. ಈಗಾಗಲೇ ಸಾಯಿ ಪಲ್ಲವಿ ಚಿತ್ರದ ಕಥೆ ಕೇಳಿದ್ದು, ಕಥೆ ಇಷ್ಟ ಪಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ತಮ್ಮ ಪಾಲಿನ ಕಥೆ ಚಿತ್ರದಲ್ಲಿ ಪ್ರಾಮುಖ್ಯತೆ ಪಡೆಯಲಿರುವ ಕಾರಣ ಅರ್ಜುನ್​​ಗೆ ತಂಗಿಯಾಗಿ ಬಣ್ಣ ಹಚ್ಚುತ್ತಿದ್ದಾರಂತೆ.

ಡಾಲಿ ಧನಂಜಯ್​​

ಈ ಸಿನಿಮಾದ ಮತ್ತೊಂದು ವಿಶೇಷ ಏನಂದ್ರೆ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಕನ್ನಡದ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದು, ವಿಲನ್​ ಪಾತ್ರದಲ್ಲಿ ಡಾಲಿ ಧನಂಜಯ್​ ನಟಿಸುತ್ತಿದ್ದಾರೆ.

ABOUT THE AUTHOR

...view details