ಕರ್ನಾಟಕ

karnataka

ಯಶ್ ಅದ್ಭುತ ನಟನೆಗೆ ಒಲಿದು ಬಂತು ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ

By

Published : Sep 21, 2019, 2:37 AM IST

Updated : Sep 21, 2019, 7:00 AM IST

ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದ ಕೆ.ಜಿ.ಎಫ್​ ಚಾಪ್ಟರ್ -1 ಚಿತ್ರದ ನಟನೆಗೆ ಸದ್ಯ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಒಲಿದು ಬಂದಿದೆ.

ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಪಡೆದ ರಾಕಿಂಗ್​ ಸ್ಟಾರ್ ಯಶ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಈ ಬಾರಿ ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿದ್ದು, ವರ್ಷದ ಅತ್ಯುತ್ತಮ ಪ್ರದರ್ಶನ ವಿಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಕೆಜಿಎಫ್​ ಚಿತ್ರದ ನಟನೆಗೆ ಯಶ್​ಗೆ ಪ್ರಶಸ್ತಿ

ಹೈದರಾಬಾದ್​ನಲ್ಲಿ ಶುಕ್ರವಾರ ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಯಶ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದ ಕೆ.ಜಿ.ಎಫ್​ ಚಾಪ್ಟರ್ -1 ಚಿತ್ರದ ನಟನೆಗೆ ಸದ್ಯ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಒಲಿದು ಬಂದಿದೆ.

ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಪಡೆದ ರಾಕಿಂಗ್​ ಸ್ಟಾರ್ ಯಶ್

2018ನೇ ಸಾಲಿನ ಸೈಮಾ ಅವಾರ್ಡ್ ಪಡೆದಿದ್ದ ರಾಕಿಂಗ್ ಸ್ಟಾರ್ ಇದೀಗ ಮತ್ತೊಂದು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಕೆ.ಜಿ.ಎಫ್​ ಚಾಪ್ಟರ್ -2 ಚಿತ್ರೀಕರಣ ಭರದಿಂದ ಸಾಗಿದ್ದು, ಯೋಜಿತ ದಿನಾಂಕಕ್ಕೂ ಮುನ್ನವೇ ಶೂಟಿಂಗ್ ಮುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Last Updated : Sep 21, 2019, 7:00 AM IST

ABOUT THE AUTHOR

...view details