ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ 'ಪೆಡ್ರೊ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಪ್ರತಿಷ್ಠಿತ ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಖುಷಿಯ ವಿಚಾರವನ್ನು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿರುವ ರಿಷಬ್ 'ಪೆಡ್ರೋ' ನನ್ನ ಸ್ವಂತ ಬ್ಯಾನರ್ನಲ್ಲಿ ತಯಾರಾದ ಚಿತ್ರ. ನಟೇಶ್ ಹೆಗ್ಡೆ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯಲಿದ್ದಾರೆ. ಚಿತ್ರವು ಗೋಸ್ ಟು ಕೇನ್ಸ್ಗಾಗಿ ಆಯ್ಕೆಯಾಗಿದ್ದು, ಅದೊಂದು ವಿಶ್ವದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಕೇನ್ಸ್ ಚಲನಚಿತ್ರೋತ್ಸವದ ಪ್ರತಿರೂಪವಾಗಿದೆ ಎಂದಿದ್ದಾರೆ.