ಚೆನ್ನೈ : ಇಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ನಟ ಹುಚ್ಚ ವೆಂಕಟ್ ಅವರನ್ನು ರಾಂಧವ ಚಿತ್ರತಂಡ ಪತ್ತೆ ಹೆಚ್ಚಿದೆ.
ಚೆನ್ನೈನಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಪತ್ತೆ ಹಚ್ಚಿದ ರಾಂಧವ ತಂಡ - ನಟ ಭುವನ್ ಪೊನ್ನಪ್ಪ
ಕೊಳಕು ಬಟ್ಟೆ ಹಾಗೂ ಕಾಲಲ್ಲಿ ಚಪ್ಪಲಿ ಇಲ್ಲದೆ ಚೆನ್ನೈನ ಬೀದಿಗಳಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಅವರನ್ನು ರಾಂಧವ ತಂಡ ಪತ್ತೆ ಹಚ್ಚಿದ್ದು, ಬೆಂಗಳೂರಿಗೆ ಕರೆತರುತ್ತಿದೆ.
ಯುಎಫ್ಓ ಕ್ಯೂಬ್ ಅಪ್ಲೋಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ ರಾಂಧವ ಚಿತ್ರತಂಡದ ಕಣ್ಣಿಗೆ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದರು. ಕೊಳಕಾದ ಬಟ್ಟೆ ಹಾಗೂ ಕಾಲಲ್ಲಿ ಚಪ್ಪಲಿ ಇಲ್ಲದೆ ಅಲ್ಲಿಯ ಬೀದಿಗಳಲ್ಲಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಅವರನ್ನು ನೋಡಿದ ನಿರ್ದೇಶಕ ಸುನೀಲ್ ಹಾಗೂ ನಿರ್ಮಾಪಕರು ಶಾಕ್ ಆಗಿದ್ದರು. ವೆಂಕಟ್ ಅವರನ್ನು ಮಾತನಾಡಿಸಲು ಮುಂದಾಗಿದ್ದರು. ಆದ್ರೆ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿರಲಿಲ್ಲ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ಭುವನ್ ಪೊನ್ನಪ್ಪ ಹುಚ್ಚ ವೆಂಕಟ್ ಮನೆಯವ್ರಿಗೆ ವಿಷಯ ತಿಳಿಸುವ ಕೆಲಸ ಮಾಡಿದ್ದರು. ಜತೆಗೆ ವೆಂಕಟ್ ಅವರನ್ನು ಪತ್ತೆ ಹಚ್ಚುವಂತೆ ತಮ್ಮ ತಂಡಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ರಾಂಧವ ತಂಡದವರು ಹುಚ್ಚ ವೆಂಕಟ್ ಅವರನ್ನು ಪತ್ತೆ ಹಚ್ಚಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ.