ಕರ್ನಾಟಕ

karnataka

ETV Bharat / sitara

ತಮಿಳು ಇಂಡಸ್ಟ್ರಿಗೆ ಕಾಲಿಟ್ಟ ಬಿಗ್​ ಬಿ... 20 ವರ್ಷಗಳ ನಂತರ ರಮ್ಯ ಕೃಷ್ಣನ್​ ಜತೆ ನಟನೆ - ಅಮಿತಾಬ್ ಬಚ್ಚನ್

1998 ರಲ್ಲಿ ಬಿಡುಗಡೆಯಾದ ‘ಚೋಟೆ ಮಿಯಾ ಬಡೇ ಮಿಯಾ‘ ಹಿಂದಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಅಮಿತಾಬ್​ ಬಚ್ಚನ್ ಹಾಗೂ ರಮ್ಯ ಕೃಷ್ಣನ್​​ 20 ವರ್ಷಗಳ ನಂತರ ಮತ್ತೆ ತಮಿಳು ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ‘ಉಯರನ್ದ ಮಣಿದನ್‘ ​​​​​​ಸಿನಿಮಾವನ್ನು ಎಸ್​​​.ಜೆ. ಸೂರ್ಯ ನಿರ್ದೇಶಿಸುತ್ತಿದ್ದಾರೆ.

ಅಮಿತಾಬ್ ಬಚ್ಚನ್​​​, ರಮ್ಯಕೃಷ್ಣನ್​​​

By

Published : Apr 4, 2019, 9:41 AM IST

ಬಾಲಿವುಡ್ ಬಿಗ್​ ಬಿ ಅಮಿತಾಬ್ ಬಚ್ಚನ್​ ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್​​​ನ ಮೆಗಾ ಪ್ರಾಜೆಕ್ಸ್​ 'ಸೈ ರಾ ನರಸಿಂಹರೆಡ್ಡಿ' ಸಿನಿಮಾದಲ್ಲಿ ಅವರು ಸದ್ಯಕ್ಕೆ ಬ್ಯುಸಿಯಾಗಿದ್ದಾರೆ.

‘ಉಯರನ್ದ ಮಣಿದನ್‘ ಸಿನಿಮಾದಲ್ಲಿ ಅಮಿತಾಬ್ ಲುಕ್​​

ಇದರ ಜೊತೆಗೆ ತಮಿಳಿನ ‘ಉಯರನ್ದ ಮಣಿದನ್‘ ​​​​​​ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಇದು ಅಮಿತಾಬ್ ನಟಿಸಿರುವ ಮೊದಲ ತಮಿಳು ಸಿನಿಮಾ. ಎಸ್​​​.ಜೆ. ಸೂರ್ಯ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಸೂರ್ಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದಲ್ಲಿನ ಅಮಿತಾಬ್ ಲುಕ್ಕನ್ನು ರಿವೀಲ್ ಮಾಡಿದ್ದರು. ಹಾಗೇ ಅಮಿತಾಬ್​ ಅವರಂತ ದೊಡ್ಡ ನಟನೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದು ಹೇಳಿಕೊಂಡು ಸಂತೋಷ ಕೂಡಾ ವ್ಯಕ್ತಪಡಿಸಿದ್ದರು.

ನಿರ್ದೇಶಕ ಎಸ್​​​.ಜೆ. ಸೂರ್ಯ ಹಾಗೂ ಅಮಿತಾಬ್​ ಬಚ್ಚನ್​​

ವಿಶೇಷ ಎಂದರೆ ಈ ಸಿನಿಮಾದಲ್ಲಿ ಅಮಿತಾಬ್ ಜೋಡಿಯಾಗಿ ಖ್ಯಾತ ನಟಿ ರಮ್ಯ ಕೃಷ್ಣನ್​​ ನಟಿಸುತ್ತಿದ್ದಾರೆ. 1998 ರಲ್ಲಿ ಬಿಡುಗಡೆಯಾದ ‘ಚೋಟೆ ಮಿಯಾ ಬಡೇ ಮಿಯಾ‘ ಸಿನಿಮಾದಲ್ಲಿ ರಮ್ಯ ಕೃಷ್ಣನ್​​ ಅಮಿತಾಬ್​​ಗೆ ಜೋಡಿಯಾಗಿದ್ದರು ಇದೀಗ 20 ವರ್ಷಗಳ ನಂತರ ಇಬ್ಬರೂ ಜೊತೆಗೆ ನಟಿಸುತ್ತಿದ್ದಾರೆ.

ಅಮಿತಾಬ್ ಜೊತೆಗೆ ನಿರ್ದೇಶಕ

ಕನ್ನಡದ 'ಅಮೃತಧಾರೆ' ಸಿನಿಮಾದಲ್ಲೂ ಅಮಿತಾಬ್ ನಟಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ‘ಬಟ್ಟರ್ ಫ್ಲೈ’ ಸಿನಿಮಾದಲ್ಲಿ ‘ಸುಕವೇವ ಸುರಪಾನವಿದು‘ ಹಾಡನ್ನು ರಾಪ್ ಶೈಲಿಯಲ್ಲಿ ಹಾಡಿದ್ದಾರೆ. ಅಷ್ಟೇ ಏಕೆ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವೈಟ್​​​​​‘ ಕಿರುಚಿತ್ರಕ್ಕೆ ಕೂಡಾ ಅಮಿತಾಬ್ ಕಂಠದಾನ ಮಾಡಿದ್ದಾರೆ.

ABOUT THE AUTHOR

...view details