ಕರ್ನಾಟಕ

karnataka

ETV Bharat / sitara

‘ಕನ್ನಡ ಕೋಗಿಲೆ’ ಸೀಸನ್​​​ 2ರ ಕಿರೀಟ ಮುಡಿಗೇರಿಸಿಕೊಂಡ ಹಾವೇರಿಯ ಖಾಸಿಂ - ಹಾವೇರಿ ಮೂಲದ ಖಾಸಿಂ ಮೊದಲ ಸ್ಥಾನ

ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'ಯಲ್ಲಿ ಹಾವೇರಿ ಮೂಲದ ಖಾಸಿಂ ಮೊದಲ ಸ್ಥಾನ ಪಡೆದಿದಿದ್ದು, ಎರಡನೇ ಸ್ಥಾನವನ್ನು ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ಹಂಚಿಕೊಂಡಿದ್ದಾರೆ.

ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ 2 ರ ಕಿರೀಟ

By

Published : Aug 5, 2019, 3:55 AM IST

Updated : Aug 5, 2019, 8:50 AM IST

ಹಾವೇರಿ ಮೂಲದ ಖಾಸಿಂ ಅವರು 'ಶ್ರೀಮಂಜುನಾಥ' ಸಿನಿಮಾದ ''ಮಹಾಪ್ರಾಣ ದೀಪಂ.. ಶಿವಂ... ಓಂಕಾರ ದೀಪಂ ಶಿವಂ...' ಎಂಬ ಹಾಡನ್ನು ಹಾಡುವ ಮೂಲಕ ಖಾಸಗಿ ವಾಹಿನಿಯ ಗಾಯನ ರಿಯಾಲಿಟಿ ಶೋ 'ಕನ್ನಡ ಕೋಗಿಲೆ' ಸೀಸನ್ 2ರ ಕಿರೀಟವನ್ನು ಮುಡಿಗೇರಿಸಿಕೊಡಿದ್ದಾರೆ.

ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ 2 ರ ಕಿರೀಟ

ವಿಜೇತ ಖಾಸಿಂಗೆ ವಾಹಿನಿಯಿಂದ 3 ಲಕ್ಷ ರೂ. ಬಹುಮಾನ ನೀಡಲಾಯಿತು. ಎರಡನೇ ಸ್ಥಾನವನ್ನು ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ರಾಮಚಂದ್ರನ್ ಹಂಚಿಕೊಂಡಿದ್ದು, ಇವರಿಗೆ ತಲಾ 2 ಲಕ್ಷ ರೂ. ನೀಡಲಾಯಿತು. ಮೂರನೇ ಸ್ಥಾನವನ್ನು ಕೊಪ್ಪಳದ ಬಾಲಕ್ ಅರ್ಜುನ್ (7) 1 ಲಕ್ಷ ನಗದು ಬಹುಮಾನ ಪಡೆದುಕೊಂಡರು. ಬಾಲಕ ಅರ್ಜುನ್​, ಇಡೀ ಸೀಸನಲ್ಲಿ ಟ್ಯಾಗ್​ ಹೊಂದಿದ್ದ ಕನ್ನಡಕ ಧರಿಸಿ ವೀಕ್ಷಕರ ಗಮನ ಸೆಳೆದಿದ್ದ.

ಕನ್ನಡ ಕೋಗಿಲೆ ಖಾಸಿಂ

''ನಗುವ ನಯನ.. ಮಧುರ ಮೌನ...'' ಹಾಡನ್ನು ಹಾಡುವ ಮೂಲಕ ಖಾಸಿಂ ಅವರಿಗೆ ಅರ್ಚನಾ ಉಡುಪ ಅವರ ಜೊತೆಗೆ ಹಾಡುವ ಬಯಕೆ ವೇದಿಕೆ ಮೇಲೆ ಈಡೇರಿತು. ಇನ್ನು ಖಾಸಿಂ ಅವರ ತಂದೆ, ತಾಯಿ ಮಾತನಾಡಿ, ಸ್ಪರ್ಧೆಯಲ್ಲಿ ಹಾಡಿ ಮೊದಲಿಗನಾಗಿದ್ದು ತುಂಬಾ ಖುಷಿಯಾಗುತ್ತಿದೆ. ಅವನ ಆಸೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Last Updated : Aug 5, 2019, 8:50 AM IST

ABOUT THE AUTHOR

...view details